ಶನಿವಾರ, ಮಾರ್ಚ್ 28, 2020
19 °C
ಜಪಾನ್‌ ಸನಿಹ ಲಂಗರು ಹಾಕಿರುವ ‘ಡೈಮಂಡ್ ಪ್ರಿನ್ಸೆಸ್’

ಮತ್ತೆ 70 ಪ್ರಯಾಣಿಕರಲ್ಲಿ ವೈರಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ (ರಾಯಿಟರ್ಸ್): ಜಪಾನ್‌ ಕಡಲತಡಿಯಲ್ಲಿ ಪ್ರವೇಶ ನಿರ್ಬಂಧಕ್ಕೆ ಒಳಗಾಗಿರುವ ಐಷಾರಾಮಿ ಹಡಗಿನಲ್ಲಿ ಮತ್ತೆ 70 ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಹಡಗಿನಲ್ಲಿ ಸೋಂಕು ಪೀಡಿತರ ಸಂಖ್ಯೆ 355ಕ್ಕೆ ಏರಿಕೆಯಾಗಿದೆ ಎಂದು ಜಪಾನ್‌ನ ಆರೋಗ್ಯ ಸಚಿವ ಕತ್ಸುನೊಬು ಕಟೊ ಅವರು ಭಾನುವಾರ ತಿಳಿಸಿದ್ದಾರೆ.

‘ಡೈಮಂಡ್ ಪ್ರಿನ್ಸೆಸ್’ ಹಡಗಿನಲ್ಲಿರುವವರ ಪೈಕಿ ಸೋಂಕು ದೃಢಪಟ್ಟವರನ್ನು ಜಪಾನ್‌ನ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಫೆಬ್ರುವರಿ 3ರಿಂದ ಯೊಕೋಹಾಮಾ ಬಂದರಿನಲ್ಲಿ ನಿಂತಿರುವ ಹಡಗಿನಲ್ಲಿ ಸಿಬ್ಬಂದಿ ಹಾಗೂ ಪ್ರಯಾಣಿಕರು ಸೇರಿ 3,700 ಜನರಿದ್ದಾರೆ.

ಹಾಂಗ್‌ಕಾಂಗ್‌ನಲ್ಲಿ ಹಡಗಿನಿಂದ ಇಳಿದ ವ್ಯಕ್ತಿಯೊಬ್ಬರಲ್ಲಿ ಈ ಸೋಂಕು ದೃಢಪಟ್ಟಿತ್ತು. ಈ ಹಡಗು ಮುಂದೆ ಜಪಾನ್‌ಗೆ ಪ್ರಯಾಣ ಬೆಳೆಸಿತ್ತು. ಸೋಂಕಿನ ಕಾರಣ, ಪ್ರಯಾಣಿಕರು ಹಡಗಿನಿಂದ ಇಳಿಯುವುದನ್ನು ಜಪಾನ್ ಸರ್ಕಾರ ನಿರ್ಬಂಧಿಸಿದೆ. ಹಡಗಿನಲ್ಲಿರುವ ಯಾರೊಬ್ಬರೂ ವೈರಸ್‌ನಿಂದ ಮೃತಪಟ್ಟಿಲ್ಲ.

ಹೊಸ ಪ್ರಕರಣ ಇಳಿಮುಖ:  ಚೀನಾದಲ್ಲಿ ಈವರೆಗೆ ಒಟ್ಟು 68 ಸಾವಿರಕ್ಕೂ ಹೆಚ್ಚು ವೈರಸ್‌ ಪ್ರಕರಣ ದಾಖಲಾಗಿವೆ. ಈ ಪೈಕಿ ಮೃತಪಟ್ಟವರ ಸಂಖ್ಯೆ 1,665ಕ್ಕೆ ಏರಿಕೆಯಾಗಿದೆ. ಬಹುತೇಕ ಪ್ರಕರಣಗಳು ಹುಬಿ ಪ್ರಾಂತ್ಯದಲ್ಲಿ ವರದಿಯಾಗಿವೆ. ಆದರೆ ಹೊಸದಾಗಿ ಸೋಂಕು ಪತ್ತೆಯಾಗುವ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ. 

ಭಾರತೀಯರಿಗೆ ನೆರವು: ಸರ್ಕಾರ ಭರವಸೆ

ಹಡಗಿನಲ್ಲಿರುವ 138 ಭಾರತೀಯರಿಗೆ ಎಲ್ಲ ನೆರವು ನೀಡುವುದಾಗಿ ಜಪಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭರವಸೆ ನೀಡಿದೆ. ಸೋಮವಾರದಿಂದ ಆರಂಭವಾಗಲಿರುವ ಅಂತಿಮ ಸುತ್ತಿನ ಕೊರೊನಾ ವೈರಸ್ ಪತ್ತೆ ಪರೀಕ್ಷೆ ಕೆಲವು ದಿನ ನಡೆಯಲಿದೆ. ಸೋಂಕು ಇಲ್ಲ ಎಂಬುದು ದೃಢಪಟ್ಟ ತಕ್ಷಣ ಅವರನ್ನು ಭಾರತಕ್ಕೆ ಕರೆಸಿಕೊಳ್ಳಲಾಗುವುದು ಎಂದು ತಿಳಿಸಿದೆ. ಭಾರತದ 132 ಸಿಬ್ಬಂದಿ ಹಾಗೂ 6 ಮಂದಿ ಪ್ರಯಾಣಿಕರು ಹಡಗಿನಲ್ಲಿದ್ದಾರೆ. ಸೋಂಕು ತಗುಲಿರುವ ಮೂವರು ಭಾರತೀಯರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು