ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಡಿಜಿಟಲ್‌ ಅಪಪ್ರಚಾರದ ಆತಂಕ

Last Updated 22 ಸೆಪ್ಟೆಂಬರ್ 2019, 18:21 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ತಿರುಚಿದ ವಿಡಿಯೊ ಅಭ್ಯರ್ಥಿಗೆ ಮುಜುಗರ ತರಿಸಬಹುದು ಅಥವಾ ವಿದ್ಯುನ್ಮಾನ ಮತ ಯಂತ್ರದ ಬಗ್ಗೆ ಅನುಮಾನ ಮೂಡಬಹುದು, ಕಂಪ್ಯೂಟರ್‌ ವೋಟಿಂಗ್‌ ವ್ಯವಸ್ಥೆಗೆ ವೈರಸ್‌ ಲಗ್ಗೆ ಇಡಬಹುದು.

ಇವು 2020ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡಿಜಿಟಲ್‌ ತಂತ್ರಜ್ಞಾನದಿಂದ ಎದುರಾಗಬಹುದಾದ ಕೆಲವು ಬೆದರಿಕೆಗಳಾಗಿವೆ.

ಚುನಾವಣೆಗೆ ಸಿದ್ಧತೆಗಳು ಭರದಿಂದ ನಡೆಯುತ್ತಿರುವ ನಡುವೆಯೇ ಡಿಜಿಟಲ್‌ ತಂತ್ರಜ್ಞಾನದ ಅಪಾಯಗಳು ಸಹ ಚರ್ಚೆಗೆ ಗ್ರಾಸವಾಗಿವೆ. ಇದು ಇಡೀ ಚುನಾವಣಾ ವ್ಯವಸ್ಥೆ ಮೇಲೆಯೇ ಪರಿಣಾಮ ಬೀರುವ ಆತಂಕವೂ ಎದುರಾಗಿದೆ. ಕೃತಕ ಬುದ್ಧಿಮತ್ತೆಯಿಂದ ತಿರುಚಲಾದ ವಿಡಿಯೊ ಮತ್ತು ಆಡಿಯೊಗಳು ಅಭ್ಯರ್ಥಿಯೇ ಹೇಳಿಕೆ ನೀಡಿದ್ದಾನೆ ಎನ್ನುವ ರೀತಿಯಲ್ಲಿ ಬಿಂಬಿಸಬಹುದು ಎಂದು ಹೇಳಲಾಗುತ್ತಿದೆ.

ಚುನಾವಣೆ ಸಂದರ್ಭದಲ್ಲಿ ನಡೆಯುವ ಸೈಬರ್‌ ದಾಳಿ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದ ಸೈಬರ್‌ ನೀತಿ ನಿರೂಪಣೆಯ ಕೇಂದ್ರ ತಿಳಿಸಿದೆ.

’ಡಿಜಿಟಲ್‌ ತಂತ್ರಜ್ಞಾನವೊಡ್ಡುವ ಬೆದರಿಕೆ ಮತದಾರರ ನಂಬಿಕೆಗೆ ಧಕ್ಕೆ ತರಲಿದೆ‘ ಎಂದು ತಜ್ಞ ಮೌರಿಸ್‌ ಟರ್ನರ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಯಾವುದೇ ವ್ಯಕ್ತಿಯನ್ನು ವಿವಿಧ ಭಂಗಿಗಳಲ್ಲಿರುವ ರೀತಿಯಲ್ಲಿ ಚಿತ್ರ ಮತ್ತು ವಿಡಿಯೊ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರದಾಡಬಹುದು. ಇದರಿಂದ, ವ್ಯಕ್ತಿಯ ವರ್ಚಸ್ಸಿಗೆ ಧಕ್ಕೆಯಾಗಲಿದೆ ಎಂದು ಹೇಳಿದ್ದಾರೆ.

ಫೇಸ್‌ಬುಕ್‌, ಗೂಗಲ್‌, ಟ್ವಿಟರ್‌ ಕಂಪನಿ ಅಧಿಕಾರಿಗಳು ಎಫ್‌ಬಿಐ ಮತ್ತು ಬೇಹುಗಾರಿಕೆ ಇಲಾಖೆ ಅಧಿಕಾರಿಗಳ ಜತೆ ಈ ವಿಷಯದ ಬಗ್ಗೆ ಚರ್ಚಿಸಿದ್ದಾರೆ.

2016ರಲ್ಲಿ ಅಪಪ್ರಚಾರ

2016ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆದಿದ್ದು ವರದಿಯಾಗಿತ್ತು. ರಷ್ಯಾ ನಿರ್ದೇಶನದಿಂದಲೇ ತಪ್ಪು ಮಾಹಿತಿಗಳನ್ನು ಪ್ರಚಾರ ಮಾಡಲಾಗಿತ್ತು ಎನ್ನುವ ಆರೋಪಗಳು ಕೇಳಿಬಂದಿದ್ದವು. ಹೀಗಾಗಿ, ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ತಪ್ಪು ಮಾಹಿತಿ ಸಂದೇಶಗಳು ರವಾನೆಯಾಗದಂತೆ ಎಚ್ಚರವಹಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT