ಇಂಡೋನೇಷ್ಯಾ ಸಮುದ್ರದಲ್ಲಿ 7.5ರಷ್ಟು ತೀವ್ರತೆಯ ಭೂಕಂಪ, ಸುನಾಮಿ ಅಪಾಯವಿಲ್ಲ

ಶುಕ್ರವಾರ, ಜೂಲೈ 19, 2019
22 °C

ಇಂಡೋನೇಷ್ಯಾ ಸಮುದ್ರದಲ್ಲಿ 7.5ರಷ್ಟು ತೀವ್ರತೆಯ ಭೂಕಂಪ, ಸುನಾಮಿ ಅಪಾಯವಿಲ್ಲ

Published:
Updated:

ಜಕಾರ್ತಾ: ಇಂಡೋನೇಷ್ಯಾದ ದೂರದ ಸ್ಥಳ ಬಂಡಾ ಸಮುದ್ರದಲ್ಲಿ ಸೋಮವಾರ ಬೆಳಿಗ್ಗೆ 7.5ರಷ್ಟು ತೀವ್ರತೆಯ ಭೂಕಂಪ ಸಭಂವಿಸಿದೆ.

ಬೆಳಿಗ್ಗೆ 8.30ಕ್ಕೆ ಭೂಕಂಪ ಸಂಭವಿಸಿದ್ದು, ಅದರ ತೀವ್ರತೆ 7.5ರಷ್ಟು ದಾಖಲಾಗಿದೆ ಎಂದು ಅಮೆರಿಕ ಭೂ ವೈಜ್ಞಾನಿಕ ಸಮೀಕ್ಷೆ ಸಂಸ್ಥೆ(ಯುಎಸ್‌ಜಿಎಸ್‌) ಹೇಳಿದೆ.

ಆದರೆ, ಯಾವುದೇ ಸುನಾಮಿ ಸಂಭವಿಸುವ ಬಗ್ಗೆ ಮುನ್ನೆಚ್ಚರಿಕೆ ನೀಡಿಲ್ಲ.

220 ಕಿ.ಮೀ. ಭೂಮಿಯಾಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಸಂಸ್ಥೆ ಹೇಳಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಇಂಡೋನೇಷ್ಯಾದಲ್ಲಿ ಭೂಕಂಪನ ಸಂಭವಿಸಿರು ಕುರಿತು ಭಾರತೀಯ ಹವಾಮಾನ ಇಲಾಖೆ ಟ್ವೀಟ್‌ ಮಾಡಿದೆ.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !