ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿಪ್ಟ್‌ನ ಮಾಜಿ ಅಧ್ಯಕ್ಷ ಇನ್ನಿಲ್ಲ

Last Updated 25 ಫೆಬ್ರುವರಿ 2020, 19:22 IST
ಅಕ್ಷರ ಗಾತ್ರ

ಕೈರೊ: ‘ಈಜಿಪ್ಟ್‌ನ ಮಾಜಿ ಅಧ್ಯಕ್ಷ ಹೋಸ್ನಿ ಮುಬಾರಕ್ (91) ಮಂಗಳವಾರ ‘ಗ್ಯಾಲಾ ಸೇನಾ ಆಸ್ಪತ್ರೆಯಲ್ಲಿ ನಿಧನ ರಾದರು’ ಎಂದು ಇಲ್ಲಿನ ಸರ್ಕಾರಿ ಸುದ್ದಿಸಂಸ್ಥೆ ವರದಿ ಮಾಡಿದೆ.

ದೀರ್ಘಾವಧಿಯಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ‘ಇಂದು ಬೆಳಗ್ಗೆ ನನ್ನ ತಂದೆ ನಿಧನರಾದರು’ ಎಂದು ಮುಬಾರಕ್ ಪುತ್ರ ಅಲಾ ಮುಬಾರಕ್ ಟ್ವೀಟ್ ಮಾಡಿದ್ದಾರೆ.1981ರಲ್ಲಿ ಅಧ್ಯಕ್ಷ ಹುದ್ದೆಗೇರಿದ್ದು, ಮೂರು ದಶಕಗಳ ಕಾಲ ಅವರು ಅಧಿಕಾರದಲ್ಲಿದ್ದರು.

ಹಿರಿಯಜ್ಜ ನಿಧನ

ಟೋಕಿಯೊ (ಎಪಿ): ವಿಶ್ವದ ಅತಿ ಹಿರಿಯ ಪುರುಷ ಎಂದು ಈ ವರ್ಷದ ಫೆ.12ರಂದು ಗಿನ್ನೆಸ್‌ ದಾಖಲೆ ಪುಸ್ತಕ ಸೇರಿದ್ದ ಜಪಾನ್‌ನ ನಿವಾಸಿ ಚಿತೆತ್ಸು ವತನಬೆ ಭಾನುವಾರ ನಿಧನರಾದರು. ಅವರಿಗೆ 112 ವರ್ಷವಾಗಿತ್ತು. ವತನಬೆ ಅವರಿಗೆ ಐವರು ಪುತ್ರರು, 12 ಮೊಮ್ಮಕ್ಕಳು, 16 ಮರಿ ಮಕ್ಕಳು ಇದ್ದಾರೆ. 1907 ರಲ್ಲಿ ಜನಿಸಿದ್ದ ಅವರು 18 ವರ್ಷ ತೈವಾನ್‌ನಲ್ಲಿ ಕೆಲಸ ಮಾಡಿದ್ದರು. ಬಳಿಕ ಜಪಾನ್‌ನ ನಿಗಾಟಾಗೆ ವಾಸ್ತವ್ಯ ಬದಲಿಸಿದ್ದರು. 117 ವರ್ಷದ ಮಹಿಳೆ ಕೇನ್‌ ತನಕಾ ಅವರೂ ಜಪಾನಿನವರು. ಜಗತ್ತಿನಲ್ಲಿ ಸದ್ಯ ಜೀವಂತವಿರುವ ಹಿರಿಯ ವ್ಯಕ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT