ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಥಿಯೋಪಿಯಾ ವಿಮಾನ ಪತನ; ನಾಲ್ವರು ಭಾರತೀಯರು ಸೇರಿ 157 ಮಂದಿ ಸಾವು

Last Updated 11 ಮಾರ್ಚ್ 2019, 9:58 IST
ಅಕ್ಷರ ಗಾತ್ರ

ನೈರೋಬಿ:ಇಥಿಯೋಪಿಯಾದಆಡಿಸ್ ಅಬಬಾದಿಂದ ಕೀನ್ಯಾದ ನೈರೋಬಿಗೆ ಹೊರಟಿದ್ದ ಇಥಿಯೋಪಿಯನ್ ಏರ್‌ಲೈನ್ಸ್‌ ಬೋಯಿಂಗ್–737 ವಿಮಾನ ಭಾನುವಾರ ಬೆಳಿಗ್ಗೆ ಪತನಗೊಂಡಿದೆ. ಅದರಲ್ಲಿದ್ದ 157 ಮಂದಿಯೂ ಮೃತಪಟ್ಟಿದ್ದಾರೆ ಎಂದು‌‌‌ಇಥಿಯೋಪಿಯನ್ ಮಾಧ್ಯಮಗಳು ವರದಿ ಮಾಡಿವೆ.

ಇದರಲ್ಲಿ 149 ಮಂದಿ ಪ್ರಯಾಣಿಕರು ಮತ್ತು 8 ಮಂದಿ ವಿಮಾನದ ಸಿಬ್ಬಂದಿ ಇದ್ದರು ಎಂದು ಇಥಿಯೋಪಿಯನ್ ಏರ್‌ಲೈನ್ಸ್‌ ತಿಳಿಸಿದೆ. ವಿಮಾನ ಪತನಕ್ಕೆ ಕಾರಣವನ್ನು ಈವರೆಗೆ ಖಚಿತಪಡಿಸಿಲ್ಲ.

ಬೆಳಿಗ್ಗೆ 8.38ಕ್ಕೆಆಡಿಸ್ ಅಬಾಬಾದಿಂದ ಹೊರಟ ವಿಮಾನ 6 ನಿಮಿಷಗಳ ನಂತರ ಸಂಪರ್ಕ ಕಡಿಗೊಂಡಿದೆ. 60 ಕಿ.ಮೀ ದೂರದ ಬಯಲಿನಲ್ಲಿ ಪತನವಾಗಿದೆ ಎಂದು ಏರ್‌ಲೈನ್ಸ್‌ ವಿವರಿಸಿದೆ. ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅವರು ಘಟನೆಗೆ ಟ್ವಿಟರ್‌ನಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ನಾಲ್ವರು ಭಾರತೀಯರು: ದುರಂತದಲ್ಲಿ ಮೃತಪಟ್ಟ ಪ್ರಯಾಣಿಕರಲ್ಲಿ ನಾಲ್ವರು ಭಾರತೀಯರು ಇದ್ದಾರೆ. 32 ಮಂದಿ ಕೀನ್ಯಾ, 9 ಮಂದಿ ಇಥಿಯೋಪಿಯಾ, ಕೆನಡಾದ 18, ಚೀನಾ, ಅಮೆರಿಕ ಮತ್ತು ಇಟಲಿಯ ತಲಾ 8, ಫ್ರಾನ್ಸ್, ಬ್ರಿಟನ್‌ನ ತಲಾ 7 ಮತ್ತು ನೆದರ್‌ಲ್ಯಾಂಡ್‌ನ 5 ಮತ್ತುಸ್ಲೊವಾಕಿಯಾದ ನಾಲ್ವರು ಮೃತಪಟ್ಟಿರುವುದನ್ನುಏರ್‌ಲೈನ್‌ ಸಿಇಒ ಮತ್ತು ಕೀನ್ಯಾ ಸಾರಿಗೆ ಸಚಿವರು ದೃಢ ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT