ಇಥಿಯೋಪಿಯಾ ಪ್ರಧಾನಿ ರ‍್ಯಾಲಿಯಲ್ಲಿ ಬಾಂಬ್ ಸ್ಫೋಟ

7

ಇಥಿಯೋಪಿಯಾ ಪ್ರಧಾನಿ ರ‍್ಯಾಲಿಯಲ್ಲಿ ಬಾಂಬ್ ಸ್ಫೋಟ

Published:
Updated:

ಆಡಿಸ್ ಅಬಾಬಾ (ಎಎಫ್‌ಪಿ): ಇಥಿಯೋಪಿಯಾದ ನೂತನ ಪ್ರಧಾನಿ ಅಬಿ ಅಹಮದ್ ಅವರ ಮೊದಲ ಸಾರ್ವಜನಿಕ ರ‍್ಯಾಲಿಯಲ್ಲಿ ಬಾಂಬ್ ಸ್ಫೋಟಗೊಂಡು ಹಲವರು ಸಾವಿಗೀಡಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ರಾಜಧಾನಿ ಆಡಿಸ್ ಅಬಾಬಾದ ಕೇಂದ್ರ ಭಾಗದಲ್ಲಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಪ್ರಧಾನಿ ಮಾತು ಮುಗಿಸುತ್ತಿದ್ದಂತೆ ಬಾಂಬ್ ಸ್ಫೋಟಗೊಂಡಿತು. ಗಾಬರಿಗೊಂಡ ಜನರು ವೇದಿಕೆಯತ್ತ ನುಗ್ಗಿದರು. ಪ್ರಧಾನಿ ಸುರಕ್ಷಿತವಾಗಿ ಅಲ್ಲಿಂದ ತೆರಳಿದರು. ಸ್ಫೋಟದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಅಬಿ ಅವರು ಏಪ್ರಿಲ್‌ನಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಮೂರು ತಿಂಗಳ ಅವಧಿಯಲ್ಲಿ ಹತ್ತಾರು ಬದಲಾವಣೆಗೆ ಅವರು ಕಾರಣರಾಗಿದ್ದಾರೆ. ಭದ್ರತಾ ಪಡೆಗಳ ಸೇವೆಯಲ್ಲಿ ಬದಲಾವಣೆ, ಕೈದಿಗಳ ಬಿಡುಗಡೆ ನಿರ್ಧಾರ, ಉದಾರ ಆರ್ಥಿಕತೆಯತ್ತ ಹೆಜ್ಜೆ ಇಡುವುದು ಮತ್ತು ಎರಿಟ್ರಿಯಾ ಜೊತೆಗಿನ ಎರಡು ದಶಕಗಳ ಸಂಘರ್ಷಕ್ಕೆ ಪರಿಹಾರದಂತದ ದಿಟ್ಟ ಕ್ರಮಗಳನ್ನು ಅವರು ತೆಗೆದುಕೊಂಡಿದ್ದರು.

‘ಇಥಿಯೋಪಿಯಾ ಮತ್ತೆ ಅಗ್ರಸ್ಥಾನಕ್ಕೆ ಏರಲಿದೆ. ಪ್ರೀತಿ, ಒಗ್ಗಟ್ಟು ಹಾಗೂ ಒಳಗೊಳ್ಳುವಿಕೆಗಳು ಇದರ ಬುನಾದಿ’ ಎಂದು ಶನಿವಾರ ನಡೆದ ರ‍್ಯಾಲಿಯಲ್ಲಿ ಅವರು ಹೇಳಿದ್ದರು. 

2015ರಲ್ಲಿ ಆರಂಭವಾದ ತೀವ್ರ ಪ್ರತಿಭಟನೆಯಿಂದಾಗಿ ಹೈಲೆಮಾರಿಯಮ್ ಡೆಸಾಲ್ಜೆನ್ ಅವರು ಫೆಬ್ರುವರಿಯಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !