ಶನಿವಾರ, ಜೂನ್ 6, 2020
27 °C
ಶೀಘ್ರ ಭಾರತ ತಲುಪಲಿವೆ 50 ವೆಂಟಿಲೇಟರ್‌

ಭಾರತಕ್ಕೆ 200 ವೆಂಟಿಲೇಟರ್ ಒದಗಿಸಲು ಅಮೆರಿಕ ನಿರ್ಧಾರ

ಪಿಟಿಐ Updated:

ಅಕ್ಷರ ಗಾತ್ರ : | |

ventilators

ವಾಷಿಂಗ್ಟನ್: ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ದ್ವಿಪಕ್ಷೀಯ ಸಹಕಾರವನ್ನು ವೃದ್ಧಿಗೊಳಿಸುವ ಉದ್ದೇಶದಿಂದ ಭಾರತಕ್ಕೆ 200 ವೆಂಟಿಲೇಟರ್‌ಗಳನ್ನು ನೀಡಲು ಅಮೆರಿಕ ನಿರ್ಧರಿಸಿದೆ. ಈ ಪೈಕಿ 50 ವೆಂಟಿಲೇಟರ್‌ಗಳು ಶೀಘ್ರ ಭಾರತ ತಲುಪಲಿವೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.  

ಕಳೆದ ವಾರವಷ್ಟೇ ವೆಂಟಿಲೇಟರ್‌ಗಳನ್ನು ಭಾರತಕ್ಕೆ ವೆಂಟಿಲೇಟರ್‌ಗಳನ್ನು ನೀಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದರು. ಅಮೆರಿಕದ ಪರವಾಗಿ ಅಲ್ಲಿನ ಯುಎಸ್‌ಎಐಡಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ವೈದ್ಯಕೀಯ ಉಪಕರಣಗಳು ಹಾಗೂ ವೆಂಟಿಲೇಟರ್‌ಗಳನ್ನು ಪೂರೈಸುತ್ತಿದೆ. ಇದು ಅಮೆರಿಕ ಸರ್ಕಾರದ ‘ದೇಣಿಗೆ’ಯಾಗಿದ್ದು, ಯಾವುದೇ ಹಣ ಪಡೆದುಕೊಳ್ಳುತ್ತಿಲ್ಲ ಎಂದು ಯುಎಸ್ಎಐಡಿ ನಿರ್ದೇಶಕಿ ರಮೋನ ಎಲ್‌ ಹಮ್‌ಜೌರಿ ಹೇಳಿದ್ದಾರೆ.

ಇದನ್ನೂ ಓದಿ: 

‘ದೇಣಿಗೆಯಾಗಿ ಕೊಡುವಂತಹ ವೆಂಟಿಲೇಟರ್‌ಗಳನ್ನು ಯಾವ ಆಸ್ಪತ್ರೆಗಳಿಗೆ ನೀಡಬೇಕು ಎನ್ನುವುದರ ಕುರಿತು ಆರೋಗ್ಯ ಸಚಿವಾಲಯ ಮತ್ತು ರೆಡ್‌ ಕ್ರಾಸ್‌ ಸಂಸ್ಥೆ ಜೊತೆಗೆ ಚರ್ಚಿಸುತ್ತಿದ್ದೇವೆ. ವಿಶ್ವದಾದ್ಯಂತ ಕೋವಿಡ್‌–19 ವಿರುದ್ಧದ ಹೋರಾಟಕ್ಕೆ ಯುಎಸ್‌ಎಐಡಿ ಹಾಗೂ ಅಮೆರಿಕ ಜೊತೆಯಾಗಿ ಆರ್ಥಿಕ ನೆರವು ನೀಡುತ್ತಿವೆ. ಭಾರತಕ್ಕೂ ಅನುದಾನ ನೀಡಲಾಗಿದೆ’ ಎಂದು ಅವರು ಹೇಳಿದ್ದಾರೆ.

ಕೋವಿಡ್‌-19 ವಿರುದ್ಧದ ಹೋರಾಟದಲ್ಲಿ ತಮ್ಮ ದೇಶವು ಭಾರತಕ್ಕೆ ವೆಂಟಿಲೇಟರ್‌ಗಳನ್ನು ದಾನ ನೀಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಟ್ವೀಟ್ ಮಾಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು