ಭಾನುವಾರ, ಸೆಪ್ಟೆಂಬರ್ 15, 2019
27 °C

ಜಪಾನ್‌: ರಾಕೆಟ್‌ ಉಡಾವಣೆ ರದ್ದು

Published:
Updated:

ಟೋಕಿಯೊ: ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ(ಐಎಸ್‌ಎಸ್‌) ಬುಧವಾರ ಸರಕು ಹೊತ್ತೊಯ್ಯಲು ಸಿದ್ಧವಾಗಿದ್ದ ರಾಕೆಟ್‌ನ ಉಡಾವಣೆಯನ್ನು, ಜಪಾನ್‌ ಬಾಹ್ಯಾಕಾಶ ಸಂಸ್ಥೆ ರದ್ದುಗೊಳಿಸಿದೆ.  

ಮಿತ್ಸುಬಿಷಿ ಬೃಹತ್‌ ಕೈಗಾರಿಕೆ(ಎಂಎಚ್‌ಐ)ರಾಕೆಟ್‌ ಉಡಾವಣೆಗೆ ಸಿದ್ಧವಾಗುತ್ತಿದ್ದಂತೆಯೇ, ಉಡಾವಣಾ ಸ್ಥಳದ ಸಮೀಪದಲ್ಲೇ ಬೆಂಕಿ ಅವಘಡ ಸಂಭವಿಸಿತ್ತು. ‘ಅವಘಡದಿಂದ ರಾಕೆಟ್‌ ಮತ್ತು ಉಡಾವಣಾ ಕೇಂದ್ರಕ್ಕೆ ಹಾನಿಯಾಗಿದೆಯೆ ಎನ್ನುವುದನ್ನು ಪರೀಕ್ಷಿಸಲಾಗುತ್ತಿದೆ’ ಎಂದು ಎಂಎಚ್‌ಐ ತಿಳಿಸಿದೆ. ಗಗನಯಾತ್ರಿಗಳಿಗೆ ಆಹಾರ, ಕುಡಿಯುವ ನೀರು, ಸಂಶೋಧನಾ ಉಪಕರಣಗಳು ಸೇರಿದಂತೆ ಅಂದಾಜು 5.3 ಟನ್‌ ಸರಕು ರಾಕೆಟ್‌ ಒಳಗಿತ್ತು.    

 

Post Comments (+)