ಶುಕ್ರವಾರ, ಏಪ್ರಿಲ್ 10, 2020
19 °C

ನವಾಜ್ ಷರೀಫ್ ತಲೆಮರೆಸಿಕೊಂಡಿದ್ದಾರೆ: ಪಾಕ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ (70) ಅವರು ಜಾಮೀನು ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರು ‘ತಲೆಮರೆಸಿಕೊಂಡಿದ್ದಾರೆ’ ಎಂದು ಅಲ್ಲಿನ ಸರ್ಕಾರ ಘೋಷಿಸಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.

‘ಷರೀಫ್ ಅವರು ಲಂಡನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುರಿತು ವೈದ್ಯಕೀಯ ವರದಿಗಳನ್ನು ಹಾಜರುಪಡಿಸಲು ವಿಫಲವಾಗಿದ್ದಾರೆ. ಅವರು ಕಳುಹಿಸಿರುವ ವೈದ್ಯಕೀಯ ಪ್ರಮಾಣಪತ್ರವನ್ನು ವೈದ್ಯಕೀಯ ಮಂಡಳಿ ತಿರಸ್ಕರಿಸಿದೆ. ಹಾಗಾಗಿ ಷರೀಫ್ ತಲೆಮರೆಸಿಕೊಂಡವರು ಎಂದು ಸರ್ಕಾರ ಘೋಷಿಸುತ್ತಿದೆ’ ಎಂದು ಪ್ರಧಾನಿಯ ವಿಶೇಷ ಸಹಾಯಕಿ ಫಿರ್ದೋಸ್ ಆಶಿಕ್ ಅವಾನ್ ಹೇಳಿದ್ದಾರೆ.

ಚಿಕಿತ್ಸೆಗಾಗಿ ನಾಲ್ಕು ವಾರಗಳ ಅವಧಿಗೆ ವಿದೇಶಕ್ಕೆ ತೆರಳಲು ಲಾಹೋರ್‌ ಹೈಕೋರ್ಟ್ ಅನುಮತಿ ನೀಡಿದ ಬಳಿಕ, ನವೆಂಬರ್‌ನಲ್ಲಿ ಷರೀಫ್ ಅವರು ಲಂಡನ್‌ಗೆ ತೆರಳಿದ್ದರು.

‘ಇಸ್ಲಾಮಾಬಾದ್ ಹೈಕೋರ್ಟ್ ಆದೇಶದ ಮೇರೆಗೆ ರಚನೆಯಾಗಿರುವ ಮಂಡಳಿ ಎದುರು ಷರೀಫ್ ಅವರು ತಮ್ಮ ವೈದ್ಯಕೀಯ ಪರೀಕ್ಷಾ ವರದಿಗಳನ್ನು ಹಾಜರುಪಡಿಸಬೇಕಿತ್ತು. ಜಾಮೀನು ನೀಡುವ ವೇಳೆ ಈ ಕುರಿತು ನಿಬಂಧನೆ ವಿಧಿಸಲಾಗಿತ್ತು. ಆದರೆ ಅವರು ಇದನ್ನು ಉಲ್ಲಂಘಿಸಿದ್ದಾರೆ’ ಎಂದು ವರದಿಯಲ್ಲಿ ಹೇಳಲಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು