ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಗಯೂಮ್‌ಗೆ ಜೈಲು

Last Updated 28 ನವೆಂಬರ್ 2019, 19:40 IST
ಅಕ್ಷರ ಗಾತ್ರ

ಮಾಲೆ, ಮಾಲ್ಡೀವ್ಸ್:ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ಯಾಮೀನ್‌ ಅಬ್ದುಲ್‌ ಗಯೂಮ್‌ ಅವರನ್ನು ದೋಷಿ ಎಂದು ಪರಿಗಣಿಸಿರುವ ನ್ಯಾಯಾಲಯ 5 ವರ್ಷಗಳಜೈಲು ಶಿಕ್ಷೆ ವಿಧಿಸಿದೆ.

ಐದು ಮಂದಿ ನ್ಯಾಯಾಧೀಶರಿದ್ದ ಇಲ್ಲಿನ ಅಪರಾಧ ನ್ಯಾಯಾಲಯ ಗುರುವಾರ ಶಿಕ್ಷೆ ಪ್ರಕಟಿಸಿ, ₹ 35.77 ಕೋಟಿ ದಂಡ ಭರಿಸುವಂತೆ ತೀರ್ಪು ನೀಡಿತು.

ತಮ್ಮ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ, ಮಾಧ್ಯಮಗಳ ಮೇಲೆ ನಿಯಂತ್ರಣ ಹಾಗೂ ವಿರೋಧ ಪಕ್ಷಗಳ ವಿರುದ್ಧ ಸೇಡಿನ ರಾಜಕಾರಣ ನಡೆಸಿದ್ದರು ಎಂಬ ಆರೋಪಗಳನ್ನು ಗಯೂಮ್‌ ವಿರುದ್ಧ ಹೊರಿಸಲಾಗಿತ್ತು.

2013–18ರಲ್ಲಿ ಅಧ್ಯಕ್ಷರಾಗಿದ್ದ ಗಯೂಮ್‌, ಚೀನಾ ಪರ ಧೋರಣೆ ಹೊಂದಿದ್ದರಲ್ಲದೆ, ಹಿಂದೂ ಮಹಾಸಾಗರದಲ್ಲಿ ಚೀನಾದ ಪ್ರಭಾವ ಹೆಚ್ಚಲು ಸಹಾಯ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT