7
ಶಾರ್ಜಾದಲ್ಲಿ ಕೈದಿಗಳಂತೆ ಜೀವನನಿರ್ವಹಣೆ

ಸಂಕಷ್ಟದಲ್ಲಿದ್ದ ಭಾರತೀಯ ಕುಟುಂಬಕ್ಕೆ ಹರಿದುಬಂತು ಸಹಾಯಹಸ್ತ

Published:
Updated:

ದುಬೈ: ಸಂಯುಕ್ತ ಅರಬ್‌ ಒಕ್ಕೂಟದಲ್ಲಿ (ಯುಎಇ) ಕೈದಿಗಳಂತೆ ಬದುಕುತ್ತಿರುವ ಭಾರತದ ಕುಟುಂಬವೊಂದರ ಇದೀಗ ದೊಡ್ಡದಾಗಿ ಸುದ್ದಿ ಮಾಡಿದ್ದು, ಹಲವು ಮಂದಿ ಈ ಕುಟುಂಬದ ನೆರವಿಗೆ ಧಾವಿಸಿದ್ದಾರೆ. ಈ ಪೈಕಿ ಕೆಲವರು ಆರ್ಥಿಕ ನೆರವು ನೀಡಲು ಮುಂದಾದರೆ, ಮತ್ತೆ ಕೆಲವರು ಉದ್ಯೋಗದ ಭರವಸೆ ನೀಡಿದ್ದಾರೆ.

ಕೇರಳದ ಮಧುಸೂದನ್‌ ಅವರು ಶ್ರೀಲಂಕಾದ ರೋಹಿಣಿಯನ್ನು ವರಿಸಿ ಕಳೆದ ನಾಲ್ಕು ದಶಕದಿಂದ ಶಾರ್ಜಾದಲ್ಲಿ ನೆಲೆಸಿದ್ದಾರೆ. ಇವರಿಗೆ ಅಶ್ವಥಿ, ಸಂಗೀತಾ, ಶಾಂತಿ ಹಾಗೂ ಮಿಥುನ್‌ ಸೇರಿ ಐವರು ಮಕ್ಕಳು. ಇಡೀ ಕುಟುಂಬದ ಸದಸ್ಯರೆಲ್ಲರೂ ನಿರುದ್ಯೋಗಿಗಳಾಗಿದ್ದು, ಶಾರ್ಜಾದ ಪಾಳುಬಿದ್ದ ಎರಡು ಕೊಠಡಿಯಲ್ಲಿ ನೆಲೆಸಿದ್ದಾರೆ.

‘ಸರಿಯಾದ ಆದಾಯವಿಲ್ಲದ ಕಾರಣ, ದಿನದೂಡುವುದು ದುಸ್ತರವಾಗಿದೆ. ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವುದು ಮಕ್ಕಳು ಶಿಕ್ಷಣ ಪಡೆದಿಲ್ಲ. ನಿತ್ಯವೂ ಬ್ರೆಡ್‌ ತಿಂದು ಜೀವನ ನಡೆಸುತ್ತಿದ್ದಾರೆ’ ಎಂದು ಕರುಣಾಜನಕ ಕಥೆಯನ್ನು ಇಲ್ಲಿನ ಪ್ರಮುಖ ದೈನಿಕ ಖಲೀಜ್‌ಟೈಮ್ಸ್‌ ವರದಿ ಮಾಡಿತ್ತು.

ವಾಸುದೇವ್‌ ಅವರ ಐದು ಮಕ್ಕಳ ಪೈಕಿ, ನಾಲ್ವರು ಮಕ್ಕಳು ಪಾಸ್‌ಪೋರ್ಟ್‌ ಹೊಂದಿದ್ದಾರೆ. ಇರುವ ಪಾಸ್‌‍ಪೋರ್ಟ್‌ನ ಅವಧಿಯೂ 2012ಕ್ಕೆ ಮುಕ್ತಾಯಗೊಂಡಿದೆ. ಕುಟುಂಬದಲ್ಲಿರುವ ಏಳು ಮಂದಿ ಮಧುಸೂದನ್‌ ಮಾತ್ರ ನ್ಯಾಯಸಮ್ಮತ ಪಾಸ್‌ಪೋರ್ಟ್‌ ಹೊಂದಿದ್ದಾರೆ’ 

ಸೂಕ್ತ ದಾಖಲಾತಿ ಹೊಂದಿಲ್ಲದ ಕಾರಣ ಶಾರ್ಜಾದಲ್ಲಿರುವ ಅಧಿಕಾರಿಗಳು ಯಾವುದೇ ಸಂದರ್ಭದಲ್ಲಿ ಇಡೀ ಕುಟುಂಬವನ್ನು ಬಂಧಿಸಬಹುದಾಗಿದ್ದು, ಗಡೀಪಾರು ಮಾಡುವ ಸಾಧ್ಯತೆಗಳಿದ್ದವು, ಇದರಿಂದ ಆತಂಕಕ್ಕೆ ಒಳಗಾಗಿದ್ದ ಕುಟುಂಬದ ಹಿರಿಯ ಸದಸ್ಯ 60 ವರ್ಷದ ಮಧುಸೂದನ್ ಅವರು ನೆರವು ಕೋರಿ ಭಾರತ ರಾಯಭಾರ ಕಚೇರಿ ಮೊರೆಹೋಗಿದ್ದರು.

ನೆರವಿನ ಹಸ್ತ: ‘ಶಾರ್ಜಾದಲ್ಲಿರುವ ಕುಟುಂಬದ ನೆರವಿಗೆ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿ ನೆರವು ನೀಡಲು ಮುಂದಾಗಿದ್ದು, ಕುಟುಂಬಸ್ಥರು ಕೋರಿದ ದಾಖಲಾತಿಗಳನ್ನು ಒದಗಿಸಲು ಅಗತ್ಯ ಸಹಾಯ ಮಾಡಲಾಗುವುದು’ ಎಂದು ದುಬೈನ ಭಾರತೀಯ ಕಾನ್ಸುಲೇಟ್‌ನ ಪ್ರಭಾರಿ ರಾಯಭಾರಿ ಸುಮತಿ ವಾಸುದೇವ್‌ ತಿಳಿಸಿದರು.‌

‘ಇಲ್ಲಿರುವ ಭಾರತೀಯ ಸಮುದಾಯವು ಕುಟುಂಬಕ್ಕೆ ನೆರವಿನ ಹಸ್ತ ಚಾಚಿದ್ದು, ಕೆಲವರು ಮಧುಸೂದನ್‌ ಮತ್ತು ಕುಟುಂಬ ಸದಸ್ಯರಿಗೆ ಉದ್ಯೋಗ ನೀಡಲು ಮುಂದೆ ಬಂದಿದೆ’ ಎಂದು ಅವರು ತಿಳಿಸಿದರು.

‘ಉದ್ಯೋಗ ನೇಮಕಾತಿ ಪತ್ರ ಸಿಕ್ಕ ಬಳಿಕ ಪಾಸ್‌ಪೋರ್ಟ್‌ ನವೀಕರಣ ಮಾಡಲು ಅರ್ಜಿ ಸಲ್ಲಿಸಿದರೆ, ಭಾರತದ ನಿಯಾಮವಳಿ ಪ್ರಕಾರ ನೆರವು ನೀಡಲಾಗುತ್ತದೆ’ ಎಂದರು.

ಮಧುಸೂದನ್‌ ಪತ್ನಿ ಶ್ರೀಲಂಕಾ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದ್ದು, ಅಲ್ಲಿನ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಕುಟುಂಬಕ್ಕೆ ಸಹಾಯ ಮಾಡುವುದಾಗಿ ವಾಸುದೇವ್‌ ಅವರು ಭರವಸೆ ನೀಡಿದ್ದಾರೆ.

4 ದಶಕಗಳಿಂದ ವಾಸ್ತವ್ಯ

ಕಾರ್ಮಿಕರಾಗಿ ಯುಎಇಗೆ ಬಂದ ಮಧುಸೂದನ್‌ ಅವರು 1988ರಲ್ಲಿ ರೋಹಿಣಿ ಅವರನ್ನು ವರಿಸಿದ್ದರು. ಇದಾದ ಬಳಿಕ ಪಾಸ್‌ಪೋರ್ಟ್‌ ನವೀಕರಣಗೊಳಿಸಿ ಇಲ್ಲೇ ವಾಸ್ತವ್ಯ ಹೊಂದಿದ್ದರು, ಐವರು ಮಕ್ಕಳು ಜನಿಸಿದರೂ, ಯಾರೂ ಶಾಲೆಗೆ ಹೋಗಿರಲಿಲ್ಲ, ಆದರೆ ಈ ಮಕ್ಕಳು ತಾಯಿಯ ನೆರವಿನಿಂದ ಓದಲು, ಬರೆಯಲು ಕಲಿತಿದ್ದಾರೆ.‌

2003, 2007, 2013ರಲ್ಲಿ ಯುಎಇ ಸರ್ಕಾರ ನೀಡಿದ ಕ್ಷಮಾದಾನ ಬಳಸಿಕೊಂಡು ಈ ದೇಶ ಏಕೆ ಬಿಡಲಿಲ್ಲ? ಎಂದು ಕೇಳಿದರೆ ಕುಟುಂಬ ಒಡೆಯಲು ಇಷ್ಟವಿರಲಿಲ್ಲ ಎನ್ನುತ್ತಾರೆ ಮಧುಸೂದನ್‌. ದಶಕಗಳಿಂದ ಇಲ್ಲಿ ನೆಲೆಸಿರುವುದರಿಂದ ತಮ್ಮ ವಾಸ್ತವ್ಯವನ್ನು ಕಾನೂನಿನಂತೆ ದೃಢೀಕರಣಗೊಳಿಸಿದರೆ, ಇಲ್ಲೇ ಉಳಿಯಲು ಸಹಾಯವಾಗುತ್ತದೆ. ಮಕ್ಕಳನ್ನು ವೃತ್ತಿಪರ ಶಾಲೆಗೆ ಸೇರಿಸಬಹುದು ಎಂಬ ಭರವಸೆ ಇತ್ತು ಎಂದೂ ಹೇಳುತ್ತಾರೆ.

 

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !