ಶನಿವಾರ, ಜನವರಿ 18, 2020
21 °C

ಬಣ್ಣ ಸೂಸುವ ಹಮ್ಮಿಂಗ್‌ ಬರ್ಡ್‌ನ ಗುಟ್ಟು ರಟ್ಟು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಸಾಬೂನಿನ ಗುಳ್ಳೆಯಲ್ಲಿನ ಹೊಳೆಯುವ ಬಣ್ಣಗಳನ್ನು ಹಮ್ಮಿಂಗ್‌ ಬರ್ಡ್‌ನಲ್ಲೂ  ಕಾಣಬಹುದು. ವರ್ಣದ್ರವ್ಯ ಹೊಂದಿರುವ ಹಕ್ಕಿಯ ರೆಕ್ಕೆಗಳ ಸಂರಚನೆಯು ಬೆಳಕಿನ ಕಿರಣವನ್ನು ಪ್ರತಿಫಲಿಸುವುದರಿಂದ ಕಾಮನಬಿಲ್ಲಿನ ಬಣ್ಣಗಳು ಗೋಚರವಾಗುತ್ತವೆ ಎಂದು ಅಧ್ಯಯನ ತಿಳಿಸಿದೆ. 

ಷಿಕಾಗೋ ವಸ್ತುಸಂಗ್ರಹಾಲಯದ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ಇತರ ಹಕ್ಕಿಗಳ ರೆಕ್ಕೆಗಳಿಗೂ ಹಮ್ಮಿಂಗ್‌ ಬರ್ಡ್‌ಗಳ ರೆಕ್ಕೆಗಳಿಗೂ ವರ್ಣದ್ರವ್ಯದ ಸಂರಚನೆಯಲ್ಲಿ ವ್ಯತ್ಯಾಸ ಇರುತ್ತದೆ.

ಹಮ್ಮಿಂಗ್‌ ಬರ್ಡ್‌ನ ರೆಕ್ಕೆಗಳಲ್ಲಿನ ವರ್ಣದ್ರವ್ಯದ ‘ಮೆಲೆನೊಸಮ್‌’ಗಳು ಮಳೆಬಿಲ್ಲಿನ ಬಣ್ಣಗಳನ್ನು ಹೊರಸೂಸುತ್ತವೆ ಎಂದು ಅಧ್ಯಯನ ತಿಳಿಸಿದೆ.

ಪ್ರತಿಕ್ರಿಯಿಸಿ (+)