ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣದಲ್ಲಿ ತೊಂದರೆಗೆ ಸಿಲುಕಿದ 16 ಭಾರತೀಯರು

Last Updated 24 ಡಿಸೆಂಬರ್ 2019, 2:00 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಸಾಗರೋತ್ತರ ಭಾರತೀಯ ಕಾರ್ಡ್‌ (ಒಸಿಐ) ಇದ್ದರೂ, ರದ್ದುಗೊಂಡ ಹಳೆಯ ಪಾಸ್‌ಪೋರ್ಟ್‌ ತರದ ಕಾರಣ ಅಮೆರಿಕದಲ್ಲಿನೆಲೆಸಿರುವ ಭಾರತೀಯರಿಗೆ ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್‌ ಪಾಸ್‌ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಮಾನ್ಯತೆ ಪಡೆದ ಒಸಿಐ ಮತ್ತು ಪಾಸ್‌ಪೋರ್ಟ್‌ ಇದ್ದರೂ, ಇತ್ತೀಚೆಗೆ ಜಾರಿಯಾದ ತಾತ್ಕಾಲಿಕ ನಿಯಮದ ಅನುಸಾರ, ಪ್ರಯಾಣಿಕರು ತಮ್ಮ ರದ್ದುಗೊಂಡಪಾಸ್‌ಪೋರ್ಟ್ ತರುವುದು ಅಗತ್ಯ. ಆದರೆ ಈ ಕುರಿತು ಅರಿವಿಲ್ಲದ 16 ಪ್ರಯಾಣಿಕರುಜಾನ್‌ ಎಫ್‌ ಕೆನಡಿ ವಿಮಾನ ನಿಲ್ದಾಣದಲ್ಲಿ ಕೆಲಸಮಯ ಪರದಾಡಿದರು. ಇವರೆಲ್ಲ ದೆಹಲಿಗೆ ಹೊರಟಿದ್ದರು. ವಿಮಾನ ಹೊರಡುವ ಕೆಲವೇ ಸಮಯದ ಮೊದಲು, ನ್ಯೂಯಾರ್ಕ್‌ನಲ್ಲಿನ ಭಾರತದ ಕಾನ್ಸಲ್‌ ಜನರಲ್‌ ಸಂದೀಪ್‌ ಚಕ್ರವರ್ತಿ,ಅವರು ಜೆಕೆಎಫ್‌ ವಿಮಾನ ನಿಲ್ದಾಣದ ಏರ್‌ ಇಂಡಿಯಾ ಸಂಸ್ಥೆಗೆ ಪತ್ರ ಬರೆದು ಸಮಸ್ಯೆ ಬಗೆಹರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT