ಮಂಗಳವಾರ, ಮಾರ್ಚ್ 2, 2021
31 °C
ಆಂತರಿಕ ಕರಡು ವರದಿ

ಕೋವಿಡ್–19 | ಅಮೆರಿಕದಲ್ಲಿ ಜೂನ್ ವೇಳೆಗೆ ನಿತ್ಯವೂ 3 ಸಾವಿರ ಸಾವುಗಳು ಸಂಭವಿಸಲಿವೆ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಅಮೆರಿಕದಲ್ಲಿ ಜೂನ್ ಒಂದರ ವೇಳೆಗೆ ಕೊರೊನಾ ವೈರಸ್‌ನಿಂದಾಗಿ ನಿತ್ಯವೂ ಸುಮಾರು ಮೂರು ಸಾವಿರ ಸಾವುಗಳು ಸಂಭವಿಸಲಿದ್ದು, ಎರಡು ಲಕ್ಷದಷ್ಟು ಪ್ರಕರಣಗಳು ನಿತ್ಯವೂ ವರದಿಯಾಗಲಿವೆ ಎಂದು ಅಮೆರಿಕದ ಆಂತರಿಕ ಕರಡು ವರದಿ ಹೇಳಿದೆ. 

ಆರೋಗ್ಯ ಬಿಕ್ಕಟ್ಟಿನ ಸ್ಥಿತಿಯ ನಡುವೆಯೇ ಆರ್ಥಿಕತೆಯೂ ಕುಸಿಯಲಿದೆ ಎಂದು ವರದಿ ತಿಳಿಸಿದೆ. ಈ ವರದಿಯನ್ನು ಸೋಮವಾರ ಅಮೆರಿಕದ ಅನೇಕ ಮಾಧ್ಯಮಗಳು ಉಲ್ಲೇಖಿಸಿವೆ. 

ಅಮೆರಿಕದಲ್ಲಿ ಸೋಮವಾರದ ವೇಳೆ ಹತ್ತು ಲಕ್ಷಕ್ಕೂ ಹೆಚ್ಚು ಮಂದಿಗೆ ಕೋವಿಡ್‌–19 ಇರುವುದು ದೃಢಪಟ್ಟಿದೆ. 69 ಸಾವಿರಕ್ಕೂ ಹೆಚ್ಚು ಸಾವಿನ ಪ್ರಕರಣಗಳು ವರದಿಯಾಗಿವೆ. ಈ ನಡುವೆ ದೇಶದ ಆರ್ಥಿಕ ಸ್ಥಿತಿ ಸ್ಥಗಿತಗೊಂಡಿದ್ದು, 30 ಲಕ್ಷಕ್ಕೂ ಹೆಚ್ಚು ಮಂದಿ ನಿರುದ್ಯೋಗ ಭತ್ಯೆಗೆ ಅರ್ಜಿ ಸಲ್ಲಿಸಿದ್ದಾರೆ.

‘ಏಳು ವಾರಗಳಿಂದ ಅಮೆರಿಕ ಲಾಕ್‌ಡೌನ್ ಆಗಿದ್ದರೂ ಪರಿಸ್ಥಿತಿ ಬದಲಾಗಿಲ್ಲ. ಲಾಕ್‌ಡೌನ್ ತೆರವುಗೊಳಿಸಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಿದಲ್ಲಿ ಪರಿಸ್ಥಿತಿ ಮತ್ತಷ್ಟು ಕೆಟ್ಟದಾಗುತ್ತದೆ’ಎಂದು ದ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. 

ಆದರೆ, ಈ ವರದಿಗಳನ್ನು ಶ್ವೇತಭವನ ಮತ್ತು ಕಾಯಿಲೆ ನಿಯಂತ್ರಣ ಮತ್ತು ನಿರ್ವಹಣೆ ಕೇಂದ್ರ (ಸಿಡಿಸಿ) ಅಲ್ಲಗಳೆದಿದೆ ಎಂದು ಪತ್ರಿಕೆಯೊಂದು ‘ವಾಷಿಂಗ್ಟನ್ ಪೋಸ್ಟ್‌’ ವರದಿ ಮಾಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು