ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡೆನ್‌ ಅಸಹಾಯಕ ಕೈ ಗೊಂಬೆ: ಡೊನಾಲ್ಡ್ ಟ್ರಂಪ್‌ ವ್ಯಂಗ್ಯ

Last Updated 21 ಜೂನ್ 2020, 13:46 IST
ಅಕ್ಷರ ಗಾತ್ರ

ವಾಷಿಂಗ್ಟನ್: ‘ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಆಗಲಿರುವ ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್‌ ಅವರು ‘ಎಡಪಂಥೀಯರ ಅಸಹಾಯಕ ಕೈಗೊಂಬೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ವ್ಯಂಗ್ಯವಾಡಿದ್ದಾರೆ.

ಪ್ರತಿಸ್ಪರ್ಧಿಯ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಅವರು ಒಕ್ಲಾಹಾಮಾದಲ್ಲಿ ತಮ್ಮ ಚುನಾವಣೆ ಪ್ರಚಾರವನ್ನು ಪುನರಾರಂಭಿಸಿದರು. ಇತ್ತೀಚಿನ ಜನಾಭಿಪ್ರಾಯದ ಪ್ರಕಾರ, ಟ್ರಂಪ್‌ ಅವರು ತಮ್ಮ ಪ್ರತಿಸ್ಪರ್ಧಿಗಿಂತಲು ಶೇ 8ರಷ್ಟು ಪಾಯಿಂಟ್‌ಗಳಿಂದ ಹಿಂದುಳಿದಿದ್ದಾರೆ.

ಒಕ್ಲಾಹಾಮಾದ ತುಳ್ಸಾ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ‘ತಾವು ಅಪ್ತಸ್ತುತವಾಗುತ್ತೇವೆ ಎಂಬುದು ಬಿಡೆನ್ ಅವರಿಗೆ ತಿಳಿದಿಲ್ಲ’ ಎಂದು ಟೀಕಿಸಿದರು.

ದೇಶವನ್ನು ಕೊರೊನಾ ಸೋಂಕು ತೀವ್ರವಾಗಿ ಬಾಧಿಸಿದ ಬಳಿಕ ನಡೆಯುತ್ತಿರುವ ಟ್ರಂಪ್ ಅವರ ಮೊದಲ ಚುನಾವಣೆ ಸಮಾವೇಶ ಇದಾಗಿದೆ. ಸಾವಿರಾರು ಮಂದಿ ಭಾಗವಹಿಸಿದ್ದರು. ‘ಮಿನಿಯಾಪೊಲಿಸ್‌ನಲ್ಲಿ ದಾಂದಲೆ ನಡೆಸಿದವರ ಬಿಡುಗಡೆಗಾಗಿ ಬಿಡೆನ್‌ ಅವರ ಪ್ರಚಾರ ಸಿಬ್ಬಂದಿ ಸಾಕಷ್ಟು ಹಣ ವ್ಯಯಿಸಿದ್ದಾರೆ’ ಎಂದರು.

ನಮ್ಮನ್ನು ತಡೆಯುವ ನಿಟ್ಟಿನಲ್ಲಿ ಹಿಂಸೆ, ದಾಂದಲೆ ಸೇರಿದಂತೆ ಎಲ್ಲವನ್ನು ಎಡಪಂಥೀಯರು ಮಾಡುತ್ತಿದ್ದಾರೆ. ಆದರೆ, ಅವರಿಗೆ ನಾವು ಬಾಗುವುದಿಲ್ಲ. ದೇಶದ ವ್ಯವಸ್ಥೆಯನ್ನು ನಾಶಗೊಳಿಸಲು ಬಿಡುವುದಿಲ್ಲ ಎಂದು ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT