ಭಾನುವಾರ, ಜನವರಿ 26, 2020
31 °C

ವಿಶೇಷ ನ್ಯಾಯಾಲಯ ಸ್ಥಾಪನೆ ಅಸಂವಿಧಾನಿಕ: ಹೈಕೋರ್ಟ್‌

ಪಿಟಿಐ Updated:

ಅಕ್ಷರ ಗಾತ್ರ : | |

ಲಾಹೋರ್‌ : ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ವಿರುದ್ಧದ ಪ್ರಕರಣದ ತನಿಖೆಗೆ ವಿಶೇಷ ವಿಚಾರಣಾ ನ್ಯಾಯಾಲಯ ಸ್ಥಾಪಿಸಿದ್ದು ‘ಅಸಂವಿಧಾನಿಕ’ ಎಂದು ಲಾಹೋರ್ ಹೈಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ. 

ನ್ಯಾಯಮೂರ್ತಿಗಳಾದ ಸೈಯದ್‌ ಮುಜಾಹರ್‌ ಅಲಿ ಅಕ್ಬರ್‌ ನಖ್ವಿ, ಮೊಹಮ್ಮದ್‌ ಅಮೀರ್‌ ಭಾಟಿ ಮತ್ತು ಚೌಧರಿ ಮಸೂದ್‌ ಜಹಂಗೀರ್‌ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಮುಷರಫ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. 

ಮುಷರಫ್ ಅವರು ತಮ್ಮ ಅರ್ಜಿಯಲ್ಲಿ, ವಿಶೇಷ ವಿಚಾರಣಾ ನ್ಯಾಯಾಲಯ ಸ್ಥಾಪನೆ ಕಾನೂನುಬಾಹಿರ, ನ್ಯಾಯಾಲಯದ ವ್ಯಾಪ್ತಿ ಮೀರಿದ ಮತ್ತು ಅಸಂವಿಧಾನಿಕ ಎಂದು ಪರಿಗಣಿಸುವಂತೆ ಕೋರಿದ್ದರು. ಅರ್ಜಿಯ ಕುರಿತು ಅಂತಿಮ ತೀರ್ಪು ತೆಗೆದುಕೊಳ್ಳುವವರೆಗೂ ವಿಶೇಷ ನ್ಯಾಯಾಲಯದ ತೀರ್ಪನ್ನು ಅಮಾನತಿನಲ್ಲಿಡುವಂತೆ ಮನವಿ ಮಾಡಿದ್ದರು. 

 

 

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು