ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ.9ರಂದು ಕರ್ತಾರಪುರ ಕಾರಿಡಾರ್‌ ಸಂಚಾರಕ್ಕೆ ಮುಕ್ತ

Last Updated 16 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಲಾಹೋರ್‌: ‘ಬಹುನಿರೀಕ್ಷಿತ ಕರ್ತಾರಪುರ ಕಾರಿಡಾರ್‌ ನವೆಂಬರ್‌ 9ರಂದು ಸಂಚಾರಕ್ಕೆ ಮುಕ್ತವಾಗಲಿದೆ’ ಎಂದು ಪಾಕಿಸ್ತಾನ ಘೋಷಿಸಿದೆ.

ಉದ್ದೇಶಿತ ಕರ್ತಾಪುರಕಾರಿಡಾರ್‌ಗೆ ಸ್ಥಳೀಯ ಮತ್ತು ವಿದೇಶಿ ಪತ್ರಕರ್ತರು ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಘೋಷಣೆ ಮಾಡಲಾಗಿದೆ.

‘ಯೋಜನೆಯ ಕಾಮಗಾರಿ ಶೇ 86ರಷ್ಟು ಮುಕ್ತಾಯವಾಗಿದೆ.ಮುಂದಿನ ತಿಂಗಳೊಳಗೆ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳಲಿವೆ’ ಎಂದು ಯೋಜನೆಯ ನಿರ್ದೇಶಕ ಅತೀಫ್‌ ಮಜೀದ್‌ ತಿಳಿಸಿದರು.

ಪಾಕಿಸ್ತಾನದ ಕರ್ತಾಪುರದಲ್ಲಿರುವ ದರ್ಬಾರ್ ಸಾಹಿಬ್‌ ಮತ್ತು ಗುರುದಾಸ್‌ಪುರದ ಡೇರಾ ಬಾಬಾ ನಾನಕ್‌ ನಡುವೆ ಈ ಕಾರಿಡಾರ್‌ ಸಂಪರ್ಕ ಕಲ್ಪಿಸಲಿದ್ದು, ಭಾರತೀಯ ಸಿಖ್‌ ಯಾತ್ರಿಕರು ಮುಕ್ತವಾಗಿ ಸಂಚರಿಸಲು ಇದು ಅವಕಾಶ ಕಲ್ಪಿಸಲಿದೆ. ಇದಕ್ಕೆ ವೀಸಾ ಅಗತ್ಯವಿರುವುದಿಲ್ಲ. ಕರ್ತಾಪುರ ಸಾಹಿಬ್‌ಗೆ ಭೇಟಿ ನೀಡಲಷ್ಟೇ ಅನುಮತಿ ಪಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT