ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಮಹಾಯುದ್ಧ ನೆನಪಿಸುವ ಸ್ಪಿಟ್‌ಫೈರ್

Last Updated 6 ಆಗಸ್ಟ್ 2019, 19:54 IST
ಅಕ್ಷರ ಗಾತ್ರ

ಚಿಚೆಸ್ಟೆರ್: ಎರಡನೇ ಮಹಾಯುದ್ಧದಲ್ಲಿ ಬಳಕೆಯಾಗಿದ್ದ ‘ಸ್ಪಿಟ್‌ಫೈರ್‌’ ಯುದ್ಧ ವಿಮಾನದಲ್ಲಿ ಭಾಗಶಃ ಜಗತ್ತು ಸುತ್ತುವ ವಿನೂತನ ಯತ್ನವನ್ನು ಇಬ್ಬರು ಬ್ರಿಟಿಷ್‌ ಪೈಲಟ್‌ಗಳು ಆರಂಭಿಸಿದ್ದಾರೆ. 'ಈ ಯುದ್ಧ ವಿಮಾನ ಸ್ವಾತಂತ್ರ್ಯದ ದ್ಯೋತಕ’ ಎಂದೂ ಈ ಪೈಲಟ್‌ಗಳು ಬಣ್ಣಿಸಿದ್ದಾರೆ.

ಮಹಾಯುದ್ಧದಲ್ಲಿಬಳಸಲಾಗಿದ್ದ ವಿಮಾನವನ್ನು ನಂತರ ಸೇವೆಯಿಂದ ಹಿಂಪಡೆದಿದ್ದು, ಅಳವಡಿಸಿದ್ದ ಗನ್‌ಗಳು, ಬಿಳಿಯ ಕವಚ ಹೊರಕಾಣುವಂತೆ ಬಣ್ಣದ ಲೇಪನವನ್ನು ತೆಗೆಯಲಾಗಿತ್ತು.

‘ಇದೊಂದು ಅತ್ಯದ್ಭುತ ಯಂತ್ರ’ ಎಂದು ಪೈಲಟ್‌ ಸ್ಟೀವ್ ಬ್ರೂಕ್ಸ್ ಪ್ರತಿಕ್ರಿಯಿಸಿದರು. 76 ವರ್ಷ ಹಳೆಯದಾದ ಈ ವಿಮಾನ ಇಂಗ್ಲೆಂಡ್‌ನ ಗುಡ್‌ವುಡ್‌ ವೈಮಾನಿಕ ನೆಲೆಯಿಂದ ಗಗನಕ್ಕೆ ಚಿಮ್ಮಲಿದೆ.

ನಾಲ್ಕು ತಿಂಗಳ ಕಾಲ ಭೂಗೋಳದ ಪಶ್ಚಿಮ ಭಾಗದಲ್ಲಿ ಸುಮಾರು 43,500 ಕಿ.ಮೀ ದೂರ ಕ್ರಮಿಸಲಿದೆ. ಸದ್ಯ ಫ್ಲೈಟ್ ಅಕಾಡೆಮಿಗೆ ಕಾರ್ಯನಿರ್ವಹಿಸುವ 58 ವರ್ಷದ ಬ್ರೂಕ್ಸ್‌, 45 ವರ್ಷ ವಯಸ್ಸಿನ ಮ್ಯಾಟ್‌ ಜೋನ್ಸ್ ಇದನ್ನು ಚಾಲನೆ ಮಾಡಲಿದ್ದು, ಸುಮಾರು 30 ದೇಶಗಳಿಗೆ ಒಯ್ಯಲಿದ್ದಾರೆ. ಈ ಮೂಲಕ, ವಿಶ್ವದ ಮರೆಯಲಾಗದ ಮೈಲುಗಲ್ಲು ಎಂದೇ ಭಾವಿಸಲಾಗಿರುವ ವಿಮಾನದ ಸದ್ದನ್ನು ಕೇಳಿಸಲಿದ್ದಾರೆ.

ಅಲ್ಪ ಅಂತರದಲ್ಲಿ ದಾಳಿ ನಡೆಸುವ ಉದ್ದೇಶದಿಂದ ರೂಪಿಸಲಾಗಿದ್ದ ಸ್ಪಿಟ್‌ಫೈರ್‌ ಅನ್ನು 1940ರಲ್ಲಿ ಜರ್ಮನಿಯ ನಾಜಿಗಳು ಒಳನುಸುಳುವಿಕೆಯ ಬೆದರಿಕೆಗೆ ಪ್ರತಿರೋಧ ತೋರಲು ಇಂಗ್ಲೆಂಡ್‌ ಬಳಸಿತ್ತು. ಆಕರ್ಷಕ ರೆಕ್ಕೆಗಳು ಹಾಗೂ ಸಿಲ್ವರ್ ವರ್ಣದ ತನ್ನ ಬಾಹ್ಯ ಸ್ವರೂಪದಿಂದಾಗಿ ವಿಮಾನ ಗಮನಸೆಳೆಯುತ್ತಿತ್ತು.

ಇಂತಹ ಸುಮಾರು 20,000 ವಿಮಾನಗಳು ನಿರ್ಮಾಣವಾಗಿದ್ದವು. ಈಗ 250ಕ್ಕೂ ಕಡಿಮೆ ಉಳಿದಿವೆ. 50ಕ್ಕೂ ಕಡಿಮೆ ವಿಮಾನಗಳು ಬಳಕೆಗೆ ಶಕ್ತವಾಗಿವೆ. ಬಹುತೇಕ ಬ್ರಿಟನ್‌ನಲ್ಲಿದ್ದು, ಅಪರೂಪಕ್ಕೆ ಹಾರಾಟ ನಡೆಸಲಿವೆ.

ಸ್ವಾತಂತ್ರ್ಯದ ಸಂಭ್ರಮವನ್ನು ತಂದುಕೊಟ್ಟವರು, ಈ ವಿಮಾನದ ವಿನ್ಯಾಸಕಾರರು, ನಿರ್ಮಾತೃಗಳು, ಇದರ ಹಾರಾಟ ನಡೆಸಿದವರ ಗೌರವಾರ್ಥ ಈಗ ಭಾಗಶಃ ಜಗತ್ತು ಸುತ್ತುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT