ಮಾಲ್ಡೀವ್ಸ್‌ಗೆ ಬೇಡವಾದ ಭಾರತದ ನೆರವು

7

ಮಾಲ್ಡೀವ್ಸ್‌ಗೆ ಬೇಡವಾದ ಭಾರತದ ನೆರವು

Published:
Updated:

ನವದೆಹಲಿ: ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್‌ ಮತ್ತು ಸೈನಿಕರನ್ನು ವಾಪಸ್ ಕರೆಸಿಕೊಳ್ಳುವಂತೆ ಅಲ್ಲಿನ ಸರ್ಕಾರ ಭಾರತಕ್ಕೆ ಹೇಳಿದೆ.

ಮಾಲ್ಡೀವ್ಸ್‌ನಲ್ಲಿ ಭಾರತೀಯ ನೌಕಾಪಡೆಯ ಧ್ರುವ ಹೆಲಿಕಾಪ್ಟರ್‌ಗಳನ್ನು ಆರೋಗ್ಯ ಸೇವೆ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಬಳಸಿಕೊಳ್ಳಲಾಗುತ್ತಿತ್ತು. ಅಲ್ಲದೆ ಪೈಲಟ್‌ಗಳೂ ಸೇರಿ 50 ಸೈನಿಕರನ್ನು ಭಾರತ ಅಲ್ಲಿ ನಿಯೋಜಿಸಿತ್ತು. ಈ ನೆರವಿಗೆ ಸಂಬಂಧಿಸಿದ ಒಪ್ಪಂದದ ಅವಧಿ ಜೂನ್‌ಗೆ ಮುಗಿದಿದೆ. ಹೀಗಾಗಿ ನೆರವನ್ನು ವಾಪಸ್ ಪಡೆದುಕೊಳ್ಳುವಂತೆ ಹೇಳಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ಹೇಳಿವೆ. 

ಆದರೆ, ಮಾಲ್ಡೀವ್ಸ್‌ನಲ್ಲಿ ಚೀನಾದ ಪ್ರಭಾವ ಹೆಚ್ಚುತ್ತಿದೆ. ಈಗ ಅಲ್ಲಿ ಇರುವ ಸರ್ಕಾರಕ್ಕೆ ಚೀನಾದ ಬೆಂಬಲವಿದೆ. ಹಾಗಾಗಿ ಭಾರತದ ನೆರವನ್ನು ಮಾಲ್ಡೀವ್ಸ್ ವಾಪಸ್ ಮಾಡುತ್ತಿದೆ ಎಂದು ಮೂಲಗಳು ವಿಶ್ಲೇಷಿಸಿವೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !