ಸಿಂಗಪುರ (ಪಿಟಿಐ): ಗಗನಸಖಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ, ಭಾರತೀಯ ಮೂಲದ ವ್ಯಕ್ತಿಯೊಬ್ಬರನ್ನು ತಪ್ಪಿತಸ್ಥ ಎಂದು ನ್ಯಾಯಾಲಯ ಘೋಷಿಸಿದೆ.

2017ರಲ್ಲಿಕೊಚ್ಚಿನ್ನಿಂದ ಸಿಂಗಪುರಕ್ಕೆ ಹೊರಟಿದ್ದ ಸ್ಕೂಟ್ ವಿಮಾನದಲ್ಲಿ ಈ ಪ್ರಕರಣ ನಡೆದಿತ್ತು. ಸಿಂಗಪುರದ ಕಾಯಂ ನಿವಾಸಿಯಾದ ಆರೋಪಿ ವಿಜಯನ್ ಮಾಥನ್ ಗೋಪಾಲ್ (39) ವಿರುದ್ಧ ಮೂರು ಪ್ರಕರಣ ದಾಖಲಾಗಿತ್ತು.

‘ಪಾನಮತ್ತನಾಗಿದ್ದ ಆರೋಪಿ,ಮುಖವನ್ನು ಮುಟ್ಟಿ ನೀನು ತುಂಬಾ ಸುಂದರವಾಗಿದ್ದೀಯ ಎಂದು ಹೇಳಿದ್ದಲ್ಲದೇ, ತನ್ನ ಎರಡು ಕೈಗಳಿಂದ ನನ್ನ ಕೆನ್ನೆಯನ್ನು ಸವರಿದ. ನಾನು ದೂರ ಸರಿಯುತ್ತಿದ್ದಂತೆ,ನನ್ನ ಮೇಲೆ ಸಿಟ್ಟು ತೋರಬೇಡ. ಈ ವಿಮಾನಕ್ಕೆ ನಾನೇ ಬಾಸ್ ಎಂದು ಹೇಳಿ, ಅನುಚಿತವಾಗಿ ವರ್ತಿಸಿದ್ದಾನೆ’ ಎಂದು ಗಗನಸಖಿ ಆರೋಪಿಸಿದ್ದರು.

ವಿಮಾನ ಸಿಂಗಪುರದಲ್ಲಿ ಇಳಿಯುತ್ತಿದ್ದಂತೆ ಗಗನಸಖಿ, ಸ್ಕೂಟ್ ವಿಮಾನಯಾನ ಸಂಸ್ಥೆಗೆ ಮತ್ತು ವಿಮಾನ ನಿಲ್ದಾಣ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಜಿಲ್ಲಾ ನ್ಯಾಯಾಧೀಶರಾದ ಸಲೀನಾ ಇಶಾಕ್ ಪ್ರಕರಣದ ವಿಚಾರಣೆ ನಡೆಸಿದರು. ಆರೋಪಿಗೆ ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆ, ದಂಡ ವಿಧಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.