ಭಾನುವಾರ, ನವೆಂಬರ್ 17, 2019
24 °C

ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್‌ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ

Published:
Updated:
Prajavani

ಲಾಹೋರ್‌: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರ  ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಅವರ ಬಿಳಿರಕ್ತಕಣಗಳ ಸಂಖ್ಯೆಯು (ಪ್ಲೇಟ್‌ಲೆಟ್‌) ಮತ್ತಷ್ಟು ಕಡಿಮೆಯಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಕಳೆದ ಸೋಮವಾರ ಷರೀಫ್‌ ಅವರ ಪ್ಲೇಟ್‌ಲೆಟ್‌ 2 ಸಾವಿರಕ್ಕೆ ಇಳಿದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಪ್ಲೇಟ್‌ಲೆಟ್‌ ಸಂಖ್ಯೆ 51 ಸಾವಿರಕ್ಕೆ ಏರಿಕೆ ಕಂಡಿತ್ತು.

‘ನವಾಜ್ ಷರೀಫ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರಿಗೆ ನೀಡುತ್ತಿರುವ ಸ್ಟಿರಾಯ್ಡ್ ಪ್ರಮಾಣವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಯಿತು, ದುರದೃಷ್ಟವಶಾತ್ ಪ್ಲೇಟ್‌ಲೆಟ್‌ ಸಂಖ್ಯೆ ಮತ್ತೆ ಕಡಿಮೆಯಾಯಿತು. ಎಂದು ವೈದ್ಯ ಅದ್ನಾನ್‌ ಖಾನ್ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)