ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಕ್ಷಿಪಣಿ ಲಾಂಚರ್‌ ಪರೀಕ್ಷಿಸಿದ ಉತ್ತರ ಕೊರಿಯಾ

Last Updated 11 ಸೆಪ್ಟೆಂಬರ್ 2019, 19:25 IST
ಅಕ್ಷರ ಗಾತ್ರ

ಸೋಲ್‌: ಉತ್ತರ ಕೊರಿಯಾ ಮಂಗಳವಾರಮತ್ತೊಮ್ಮೆ ಬೃಹತ್‌ ಕ್ಷಿಪಣಿ ಲಾಂಚರ್‌ ಪರೀಕ್ಷೆ ನಡೆಸಿದೆ.

ಎರಡು ವಾರದ ಹಿಂದಷ್ಟೇಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್ ಮೇಲ್ವಿಚಾರಣೆಯಲ್ಲಿ ಈ ಲಾಂಚರ್‌ಗಳ ಪರೀಕ್ಷೆ ನಡೆಸಲಾಗಿತ್ತು. ಮಂಗಳವಾರ ಮತ್ತೊಮ್ಮೆ ಕಿಮ್‌ ಉಪಸ್ಥಿತಿಯಲ್ಲೇ ಪರೀಕ್ಷೆ ನಡೆದಿದೆ. ‘ಗುರುತಿಸಲಾಗದ ಕ್ಷಿಪಣಿಗಳನ್ನು ದಕ್ಷಿಣ ಪ್ಯೋನ್‌ಗನ್‌ಪ್ರಾಂತದ ಕೇಚೋನ್‌ ಪ್ರದೇಶದಿಂದ ಉತ್ತರ ಕೊರಿಯಾ ಉಡಾವಣೆಗೊಳಿಸಿದೆ. ಇದು ಅಂದಾಜು 330 ಕಿ.ಮೀ. ಕ್ರಮಿಸಿದೆ’ ಎಂದು ದಕ್ಷಿಣ ಕೊರಿಯಾ ಸೇನೆ ತಿಳಿಸಿದೆ.

ಅಣ್ವಸ್ತ್ರ ರಹಿತ ರಾಷ್ಟ್ರ ನಿರ್ಮಾಣದ ಕುರಿತು ಅಮೆರಿಕದ ಜತೆ ಮಾತುಕತೆಗೆ ಉತ್ತರ ಕೊರಿಯಾ ಉತ್ಸುಕವಾಗಿದೆ ಎಂದು ಘೋಷಿಸಿಕೊಂಡ ಕೆಲ ದಿನಗಳಲ್ಲೇ ಈ ಪರೀಕ್ಷೆ ನಡೆದಿದೆ.

‘ಪರೀಕ್ಷೆ ನಂತರ ಸ್ವತಃ ಕಿಮ್‌ ಜಾಂಗ್‌ ಉನ್‌ ಲಾಂಚರ್‌ ವೀಕ್ಷಿಸಿದ್ದು, ಚಲಿಸುತ್ತಿರುವ ಸಂದರ್ಭದಲ್ಲೇ ಕ್ಷಿಪಣಿ ಉಡಾವಣೆ ಸಾಮರ್ಥ್ಯನ್ನು ಪರೀಕ್ಷಿಸುವ ಪ್ರಕ್ರಿಯೆ ಉಳಿದಿದ್ದು,ಶೀಘ್ರದಲ್ಲೇ ಲಾಂಚರ್‌ನ ಮತ್ತೊಂದು ಪರೀಕ್ಷೆ ನಡೆಯಲಿದೆ’ ಎಂಬ ಸೂಚನೆಯನ್ನು ಕೊರಿಯನ್‌ ಕೇಂದ್ರ ಸುದ್ದಿ ಸಂಸ್ಥೆ(ಕೆಸಿಎನ್‌ಎ)ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT