ಶುಕ್ರವಾರ, ಮೇ 29, 2020
27 °C

ಭಾರತದ ರಾಯಭಾರಿಗೆ ಪಾಕ್‌ ಸಮನ್ಸ್‌

ಪಿಟಿಐ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌ : ಗಡಿ ನಿಯಂತ್ರಣ ರೇಖೆಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಪಾಕಿಸ್ತಾನ, ಭಾರತದ ಹಿರಿಯ ರಾಯಭಾರಿ ಅಧಿಕಾರಿಯನ್ನು ಕರೆಯಿಸಿ ಪ್ರತಿಭಟನೆ ದಾಖಲಿಸಿದೆ.

ಭಾರತದ ರಾಯಭಾರಿ ಅಧಿಕಾರಿಗೆ ಈ ವಾರದಲ್ಲಿ ಪಾಕಿಸ್ತಾನ ನೀಡಿರುವ ಮೂರನೇ ಸಮನ್ಸ್‌ ಇದಾಗಿದೆ. 

ಕಳೆದ ಬುಧವಾರ ಭಾರತೀಯ ಪಡೆಗಳು ಚಿರಿಕೋಟ್‌ ವಲಯಗಳಲ್ಲಿ ಕದನ ವಿರಾಮ ಉಲ್ಲಂಘಿಸಿದ್ದು, ಇದರಿಂದ 45 ವರ್ಷದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಪಾಕ್‌ ವಿದೇಶಾಂಗ ಕಚೇರಿ ತಿಳಿಸಿದೆ.

‘ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಜಿಲ್ಲೆಯ ಎರಡು ವಲಯಗಳಲ್ಲಿ ಪಾಕಿಸ್ತಾನ ಪಡೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಭಾರತೀಯ ಪಡೆ ಇದಕ್ಕೆ ಪ್ರತ್ಯತ್ತರ ನೀಡಿದೆ‘ ಎಂದು ಭಾರತೀಯ ಸೇನಾ ವಕ್ತಾರರು ತಿಳಿಸಿದ್ದಾರೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು