ಗುರುವಾರ , ನವೆಂಬರ್ 21, 2019
23 °C

ಪಾಕಿಸ್ತಾನ | ದೇಶ ಪ್ರವೇಶಿಸದಂತೆ ಪತ್ರಕರ್ತನಿಗೆ ನಿರ್ಬಂಧ

Published:
Updated:
Prajavani

ಇಸ್ಲಾಮಾಬಾದ್‌: ಪತ್ರಿಕಾ ಸ್ವಾತಂತ್ರ್ಯಸಂರಕ್ಷಣಾ ಸಂಘಟನೆ ‘ದಿ ಕಮಿಟಿ ಟು ಪ್ರೊಟೆಕ್ಟ್‌  ಜರ್ನಲಿಸ್ಟ್‌’ನ (ಸಿಪಿಜೆ) ಏಷ್ಯಾ ಸಂಯೋಜಕ ಸ್ಟೀವನ್‌ ಬಟ್ಲರ್‌ ಅವರನ್ನು ಪಾಕಿಸ್ತಾನ ಕಪ್ಪುಪಟ್ಟಿಗೆ ಸೇರಿಸಿ, ದೇಶ ಪ್ರವೇಶಿಸದಂತೆ ನಿರ್ಬಂಧಿಸಿದೆ ಎಂದು ಸಂಘಟನೆಯ ಕಾರ್ಯನಿರ್ವಾಹಕ ನಿರ್ದೇಶಕ ಜೋಯಲ್‌ ಸಿಮೊನ್‌ ಶುಕ್ರವಾರ ಹೇಳಿದ್ದಾರೆ.

‘ಮಾನ್ಯತೆ ಇರುವ ವೀಸಾ ಹೊಂದಿದ್ದರೂ ಬಟ್ಲರ್‌ ಅವರಿಗೆ ಲಾಹೋರ್‌ನ ಅಲ್ಲಾಮ ಇಕ್ಬಾಲ್‌ ವಿಮಾನ ನಿಲ್ದಾಣದಲ್ಲಿ ಪ್ರವೇಶ ನಿರಾಕರಿಸಲಾಗಿದೆ ಮತ್ತು ಅವರನ್ನು ಅಮೆರಿಕಕ್ಕೆ ವಾಪಸ್‌ ಕಳುಹಿಸಲಾಗಿದೆ’ ಎಂದಿದ್ದಾರೆ.

ಮಾನವ ಹಕ್ಕುಗಳ ಸಂಘಟನೆ ಹಮ್ಮಿಕೊಂಡಿರುವ ’ಅಸ್ಮಾ ಜಹಾಂಗೀರ್‌’ ಸಮಾವೇಶಕ್ಕೆ ಅವರು ತೆರಳಿದ್ದರು. ಪಾಕಿಸ್ತಾನ ಸರ್ಕಾರ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ.

ಪ್ರತಿಕ್ರಿಯಿಸಿ (+)