ಮಂಗಳವಾರ, ಮಾರ್ಚ್ 31, 2020
19 °C

ನವಾಜ್ ಷರೀಫ್‌ಗೆ ಜಾಮೀನು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಾಹೋರ್‌: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್ ಅವರಿಗೆ ಲಾಹೋರ್ ಹೈಕೋರ್ಟ್‌ ಶುಕ್ರವಾರ ಜಾಮೀನು ನೀಡಿದೆ. ಅನಾರೋಗ್ಯಕ್ಕೊಳಗಾಗಿರುವ ನವಾಜ್‌ ಅವರಿಗೆ ವೈದ್ಯಕೀಯ ಕಾರಣಗಳ ಮೇಲೆ ಜಾಮೀನು ದೊರೆತಿದೆ.

ತಮ್ಮ ಅಣ್ಣನನ್ನು ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯ (ಎನ್‌ಎಬಿ)ವಶದಿಂದ ಬಿಡುಗಡೆ ಮಾಡಬೇಕು ಎಂಬ ಪಿಎಂಎಲ್‌–ಎನ್‌ ಅಧ್ಯಕ್ಷ ಶಹಬಾಜ್ ಷರೀಫ್‌ ಅವರ  ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್‌ ನ್ಯಾಯಮೂರ್ತಿ ಬಾಗರ್‌ ನಜಾಫಿ ನೇತೃತ್ವದ ಪೀಠ ಜಾಮೀನು ನೀಡಿತು.

ಅಲ್ ಅಝೀಜಿಯಾ ಸ್ಟೀಲ್‌ ಮಿಲ್‌ ಪ್ರಕರಣದಲ್ಲಿ ಸಲ್ಲಿಸಲಾಗಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಇಸ್ಲಾಮಾಬಾದ್‌ ಹೈಕೋರ್ಟ್‌ ಮುಂದಕ್ಕೆ ಹಾಕಿರುವ ಕಾರಣ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ದೊರೆತಿದ್ದರೂ ಷರೀಫ್‌ ಅವರಿಗೆ ಬಿಡುಗಡೆ ಅವಕಾಶ ದೊರೆತಿರಲಿಲ್ಲ.

ಷರೀಫ್‌ ಪರ ವಾದ ಮಂಡಿಸಿದ್ದ ವಕೀಲ ಅಸ್ತರ್‌ ಅಸಫ್‌ ಅವರು, ‘ನಮ್ಮ ಕಕ್ಷಿದಾರರ ಆರೋಗ್ಯಸ್ಥಿತಿ ತುಂಬಾ ಬಿಗಡಾಯಿಸಿರುವ ಕಾರಣ ಜಾಮೀನು ನೀಡಬೇಕು’ ಎಂದು ಕೋರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು