ಪಾಕಿಸ್ತಾನ: 21 ಸಚಿವರ ಸಂಪುಟ ಅಸ್ತಿತ್ವಕ್ಕೆ

7

ಪಾಕಿಸ್ತಾನ: 21 ಸಚಿವರ ಸಂಪುಟ ಅಸ್ತಿತ್ವಕ್ಕೆ

Published:
Updated:

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಪ್ರಧಾನಿ ಇಮ್ರಾನ್‌ಖಾನ್‌ ನೇತೃತ್ವದ 21 ಸದಸ್ಯರ ಸಚಿವ ಸಂಪುಟದ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಶಾ ಮಹ್ಮೂದ್‌ ಖುರೇಶಿ ವಿದೇಶಾಂಗ ಸಚಿವರಾಗಿದ್ದಾರೆ. 

‘21 ಸದಸ್ಯರ ಪೈಕಿ 16 ಜನ ಸಚಿವರಾದರೆ, ಉಳಿದ ಐವರು ಪ್ರಧಾನಿ ಇಮ್ರಾನ್‌ಖಾನ್‌ ಅವರಿಗೆ ಸಲಹೆಗಾರರಾಗಿರುತ್ತಾರೆ’ ಎಂದು ಆಡಳಿತಾರೂಢ ತೆಹ್ರೀಕ್‌–ಎ–ಇನ್ಸಾಫ್‌ (ಪಿಟಿಐ) ವಕ್ತಾರ ಫವಾದ್‌ ಚೌಧರಿ ಹೇಳಿದ್ದಾರೆ. 

ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಅವರ ಸಂಪುಟದಲ್ಲಿದ್ದ 12 ಸದಸ್ಯರು, ಈ ಸಂಪುಟದಲ್ಲಿಯೂ ಸಚಿವರಾಗಿ ಮುಂದುವರಿದಿದ್ದಾರೆ. ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿ ನೇತೃತ್ವದ ಸರ್ಕಾರವಿದ್ದಾಗಲೂ, 2008ರಿಂದ 2011ರವರೆಗೆ ಖುರೇಶಿ ಅವರೇ ವಿದೇಶಾಂಗ ಸಚಿವರಾಗಿದ್ದರು. ಇದೇ ಅವಧಿಯಲ್ಲಿ ಅಂದರೆ, 2008ರಲ್ಲಿ ಮುಂಬೈ ಮೇಲೆ ಪಾಕಿಸ್ತಾನದ ಭಯೋತ್ಪಾದಕರು ದಾಳಿ ಮಾಡಿದ್ದರು. 

ಪರ್ವೇಜ್‌ ಖಟ್ಟಕ್‌ ರಕ್ಷಣಾ ಸಚಿವರಾಗಿ, ಅಸಾದ್‌ ಉಮರ್‌ ಹಣಕಾಸು ಸಚಿವರಾಗಿ ನೇಮಕಗೊಂಡಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !