ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ಭಾರತದ ಭಾಗ ಎಂಬ ನಕ್ಷೆ ಪ್ರಸಾರ: ಪಿಟಿವಿ ಇಬ್ಬರು ಸಿಬ್ಬಂದಿ ವಜಾ

Last Updated 12 ಜೂನ್ 2020, 8:13 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ‘ಕಾಶ್ಮೀರವು ಭಾರತದ ಭಾಗ ಎಂದು ಬಿಂಬಿಸುವ ನಕ್ಷೆಯನ್ನು ಪಾಕಿಸ್ತಾನದ ಅಧಿಕೃತ ಟಿ.ವಿ ವಾಹಿನಿ ‘ಪಿಟಿವಿ ನ್ಯೂಸ್‌’ ಪ್ರಸಾರ ಮಾಡಿದೆ.

‘ಇದು, ಸೂಕ್ತವಾದ ನಕ್ಷೆಯಲ್ಲ. ಇದನ್ನು ಪ್ರಸಾರ ಮಾಡಿದ್ದು ಕರ್ತವ್ಯಲೋಪ’ ಎಂದು ಪ್ರತಿಪಾದಿಸಿರುವ ಪಿಟಿವಿ ನ್ಯೂಸ್ ಆಡಳಿತವು, ತನ್ನ ಇಬ್ಬರು ಸಿಬ್ಬಂದಿಯನ್ನು ವಜಾ ಮಾಡಿದೆ.

ಜೂನ್‌ 6ರಂದು ನಕ್ಷೆ ಪ್ರಸಾರ ಮಾಡಲಾಗಿತ್ತು. ಜೂನ್‌ 8ರಂದು ಸಂಸತ್ತಿನಲ್ಲಿ ಈ ವಿಷಯ ಚರ್ಚೆಯಾಗಿತ್ತು. ಸಂಸತ್ತಿನ ಅಧ್ಯಕ್ಷ ಸಾದಿಕ್‌ ಸಂಜ್ರಾಣಿ ಅವರು, ವಿಷಯವನ್ನು ಸ್ಥಾಯಿ ಸಮಿತಿ ವಿವೇಚನೆಗೆ ಒಪ್ಪಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದರು.

ಪಿಟಿವಿ ಆಡಳಿತವು ಈ ಕುರಿತು ಟ್ವೀಟ್‌ ಮಾಡಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿತ್ತು. ಅದರಂತೆ ಜೂನ್‌ 10ರಂದು ಇಬ್ಬರನ್ನು ಸೇವೆಯಿಂದ ವಜಾಮಾಡಿ ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT