ಮಂಗಳವಾರ, ನವೆಂಬರ್ 19, 2019
27 °C

ಗುರಿ ಮುಟ್ಟುವವರೆಗೆ ಸಿರಿಯಾ ಮೇಲಿನ ದಾಳಿ ನಿಲ್ಲದು ಎಂದ ಟರ್ಕಿ ಅಧ್ಯಕ್ಷ

Published:
Updated:

ಇಸ್ತಾಂಬುಲ್‌: ‘ನಮ್ಮ ಗುರಿಯನ್ನು ತಲುಪುವವರೆಗೆ, ಉತ್ತರ ಸಿರಿಯಾದಲ್ಲಿ ಕುರ್ದಿಶ್‌ ಉಗ್ರರ ವಿರುದ್ಧ ಆರಂಭಿಸಿರುವ ಕಾರ್ಯಾಚರಣೆಯನ್ನು ನಿಲ್ಲಿಸುವುದಿಲ್ಲ’ ಎಂದು ಟರ್ಕಿ ಅಧ್ಯಕ್ಷ ರೆಸಿಪ್‌ ತಯ್ಯಿಪ್‌ ಎರ್ಡೊಗನ್‌ ಮಂಗಳವಾರ ಇಲ್ಲಿ ಹೇಳಿದ್ದಾರೆ.

ಕುರ್ದಿಶ್‌ ಜನರನ್ನು ಭಯೋತ್ಪಾದಕರು ಎಂದೇ ಪರಿಗಣಿಸಿರುವ ಟರ್ಕಿ, ಸಿರಿಯನ್‌ ಕುರ್ದಿಶ್‌ ಪೀಪಲ್ಸ್‌ ಪ್ರೊಟೆಕ್ಷನ್‌ ಯುನಿಟ್ಸ್‌ (ವೈಪಿಜಿ) ವಿರುದ್ಧ ನಡೆಸುತ್ತಿರುವ ದಾಳಿ ಈಗ ಏಳನೇ ದಿನಕ್ಕೆ ಕಾಲಿಟ್ಟಿದೆ.

‘ಸಿರಿಯಾಕ್ಕೆ ಸೇರಿದ ಸಾವಿರ ಚದರ ಕಿ.ಮೀ.ನಷ್ಟು ಪ್ರದೇಶವನ್ನು ಪ್ರತ್ಯೇಕತಾವಾದಿ ಉಗ್ರರ ಕಪಿಮುಷ್ಟಿಯಿಂದ ಬಿಡುಗಡೆ ಮಾಡಲಾಗಿದೆ. ಕಾರ್ಯಾಚರಣೆ ಪೂರ್ಣಗೊಂಡ ನಂತರ ಮೊದಲ ಹಂತವಾಗಿ 10 ಲಕ್ಷ ಹಾಗೂ ಎರಡನೇ ಹಂತದಲ್ಲಿ 20 ಲಕ್ಷ ಸಿರಿಯಾ ನಿರಾಶ್ರಿತರನ್ನು ಅವರ ತಾಯ್ನಾಡಿಗೆ ಮರಳಿ ಕಳಿಸಲಾಗುವುದು. ಗಡಿಯಲ್ಲಿ ವೈಪಿಜಿ ಪ್ರೇರಿತ ಉಗ್ರ ಚಟುವಟಿಕೆ ಅಂತ್ಯಗೊಳಿಸಲಾಗುವುದ. ಮತ್ತು ಗಡಿಯನ್ನು ಸುರಕ್ಷಿತ ಪ್ರದೇಶವನ್ನಾಗಿ ಮಾಡಲಾಗುವುದು’ ಎಂದು ಟಿ.ವಿ ಮೂಲಕ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)