ಮಂಗಳವಾರ, ಆಗಸ್ಟ್ 20, 2019
22 °C

ಉತ್ತರ ಧ್ರುವದ ತುತ್ತತುದಿಯಲ್ಲಿ ದಾಖಲೆಯ ತಾಪಮಾನ

Published:
Updated:

ಮಾಂಟ್ರಿಯಲ್‌: ವಿಶ್ವದ ಉತ್ತರ ದಿಕ್ಕಿನ ತುತ್ತ ತುದಿಯ ಪ್ರದೇಶದಲ್ಲಿ ಈ ಬಾರಿ ತಾಪಮಾನದಲ್ಲಿ ದಾಖಲೆಯ ಏರಿಕೆಯಾಗಿದೆ.

ಉತ್ತರ ಧ್ರುವದಿಂದ 966 ಕಿಲೋ ಮೀಟರ್‌ ದೂರದಲ್ಲಿರುವ ಈ ನಿರ್ಜನ ಪ್ರದೇಶದಲ್ಲಿ 21 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

’ಜಾಗತಿಕ ತಾಪಮಾನದ ಪರಿಣಾಮ ಹವಾಮಾನದಲ್ಲಿ ಈ ರೀತಿಯ ಬದಲಾವಣೆ ಕಂಡು ಬಂದಿದೆ. ಇದು ಈ ಪ್ರದೇಶದ
ಲ್ಲಿನ ದಾಖಲೆಯ ತಾಪಮಾನವಾಗಿದೆ‘ ಎಂದು ಕೆನಡಾದ ಪರಿಸರ ಸಚಿವಾಲಯದಲ್ಲಿನ ಹವಾಮಾನ ತಜ್ಞ ಅರ್ಮೆಲ್‌ ಕ್ಯಾಸ್ಟೆಲ್ಲನ್‌ ತಿಳಿಸಿದ್ದಾರೆ.

’ಹವಾಮಾನ ಬದಲಾವಣೆಯು ಪರಿಣಾಮ ಬೀರುತ್ತಿದೆ. ಆರ್ಕ್ಟಿಕ್‌ ಮಹಾಸಾಗರದ ತಾಪಮಾನ ಹೆಚ್ಚಾಗುತ್ತಿರುವುದು ಸಹ ತಾಪಮಾನ ವ್ಯತ್ಯಾಸವಾಗಲು ಕಾರಣವಾಗುತ್ತಿದೆ‘ ಎಂದು ವಿಶ್ಲೇಷಿಸಿದ್ದಾರೆ.

ಶಾಶ್ವತ ಸೇನಾ ನೆಲೆಯೂ ಇರುವ ಈ ಪ್ರದೇಶದಲ್ಲಿ 1950ರಿಂದಲೂ ಹವಾಮಾನ ಕೇಂದ್ರವು ಕಾರ್ಯನಿರ್ವಹಿಸುತ್ತಿದೆ.

1956ರ ಜುಲೈ 8ರಂದು 20 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. 2012ರ ಬಳಿಕ ಹಲವು ಬಾರಿ 18.8ರಿಂದ 20 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗಿತ್ತು.

 

Post Comments (+)