ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಮ್‌ ಬಳಸುವ ರೈಲಿನ ಓಡಾಟ ಸ್ಥಗಿತ

ವದಂತಿಗೆ ಎಡೆ ಮಾಡಿದ ಉಪಗ್ರಹ ರವಾನಿಸಿದ ಚಿತ್ರಗಳು
Last Updated 27 ಏಪ್ರಿಲ್ 2020, 3:43 IST
ಅಕ್ಷರ ಗಾತ್ರ

ಸೋಲ್‌: ಉತ್ತರ ಕೊರಿಯಾದ ಪರಮೋಚ್ಛ ನಾಯಕ ಕಿಮ್‌ ಜಾಂಗ್‌ ಉನ್‌ ಅವರ ಆರೋಗ್ಯ ಕುರಿತಂತೆ ದಿನದಿನಕ್ಕೆ ಕುತೂಹಲ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ವದಂತಿಗಳೂ ಹಬ್ಬುತ್ತಿವೆ.

ಕಿಮ್‌ ಅವರ ಬಳಕೆಗೆಂದೇ ಮೀಸಲಾಗಿರುವ ರೈಲನ್ನು ದೇಶದ ಪೂರ್ವ ಕರಾವಳಿಯಲ್ಲಿರುವ ಅವರ ನಿವಾಸದ ಆವರಣದಲ್ಲಿಯೇ ನಿಲುಗಡೆ ಮಾಡಿರುವ ದೃಶ್ಯಗಳನ್ನು ಉಪಗ್ರಹವೊಂದು ಸೆರೆ ಹಿಡಿದಿದೆ. ಈ ಚಿತ್ರಗಳನ್ನು ‘38 ನಾರ್ಥ್‌’ ಎಂಬ ಜಾಲತಾಣ ಬಿಡುಗಡೆ ಮಾಡಿದ್ದು, ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಉತ್ತರ ಕೊರಿಯಾಕ್ಕೆ ಸಂಬಂಧಿಸಿದ ವಿದ್ಯಮಾನಗಳಿಗೆ ಆದ್ಯತೆ ನೀಡುವ ಈ ಜಾಲತಾಣ, ಕಿಮ್‌ ಅವರ ಆರೋಗ್ಯ ಸಮಸ್ಯೆಗಳ ಬಗ್ಗೆ ಯಾವುದೇ ಮಾಹಿತಿಯನ್ನು ಪ್ರಕಟಿಸಿಲ್ಲ. ಆದರೆ, ಕಿಮ್‌ ರಾಜಧಾನಿಯಲ್ಲಿಲ್ಲ ಎಂಬ ದಕ್ಷಿಣ ಕೊರಿಯಾ ಗುಪ್ತಚರ ಇಲಾಖೆ ಮಾಹಿತಿಯನ್ನು ಈ ಚಿತ್ರಗಳು ಪುಷ್ಟೀಕರಿಸುತ್ತವೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT