ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ವಿದ್ಯಾರ್ಥಿನಿಗೆ ವಿದೇಶದಲ್ಲಿ ಇರಿತ: ಆಸ್ಪತ್ರೆಗೆ ದಾಖಲು

Last Updated 24 ಜನವರಿ 2020, 15:54 IST
ಅಕ್ಷರ ಗಾತ್ರ

ನವದೆಹಲಿ: ತಮಿಳುನಾಡು ಮೂಲದ ವಿದ್ಯಾರ್ಥಿನಿಗೆ ಅಪರಿಚಿತನೊಬ್ಬ ಇರಿದ ಪರಿಣಾಮ ಆಕೆ ತೀವ್ರಗಾಯಗೊಂಡಿರುವ ಘಟನೆ ಕೆನಡಾದಟೊರಂಟೊದಲ್ಲಿ ನಡೆದಿದ್ದು, ಈಗ ವಿದ್ಯಾರ್ಥಿನಿ ಕುಟುಂಬ ವಿದೇಶಾಂಗ ಸಚಿವಾಲಯದ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.

23ವರ್ಷದ ರಚೆಲ್ ಆಲ್ಬರ್ಟ್ ಯಾರ್ಕ್ ಯೂನಿವರ್ಸಿಟಿಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದು, ಕ್ಯಾಂಪಸ್‌ನಲ್ಲಿವಾಯುವಿಹಾರದಲ್ಲಿದ್ದಾಗ ಈ ಘಟನೆ ನಡೆದಿದೆ.

ಯಾರ್ಕ್ ಯೂನಿವರ್ಸಿಟಿ ಸಮೀಪ ನಿಮ್ಮ ಮಗಳು ಗಾಯಗೊಂಡಿದ್ದಾಳೆ, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದುಕೆನಡಿಯನ್ ಪೊಲೀಸರು ತಿಳಿಸಿದ್ದಾರೆ. ಆಕೆಆಸ್ಪತ್ರೆಯಲ್ಲಿಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ನಾವು ವೀಸಾ ಪಡೆಯುವ ಪ್ರಯತ್ನದಲ್ಲಿದ್ದೇವೆ. ಈ ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಸಂಪರ್ಕಿಸಲಾಗಿದೆ ಎಂದು ವಿದ್ಯಾರ್ಥಿನಿ ತಂದೆ ಅಲ್ಬರ್ಟ್ ರಾಜ್‌ಕುಮಾರ್ ಮಾಧ್ಯಮದವರಿಗೆ ತಿಳಿಸಿದ್ದಾರೆ.

ವಿಷಯ ಕೇಳಿ ತುಂಬಾ ಶಾಕ್ ಆಗಿದೆ: ವಿದೇಶಾಂಗ ಸಚಿವ ಜೈಶಂಕರ್
ವಿದ್ಯಾರ್ಥಿನಿ ರಚೆಲ್ ಆಲ್ಬರ್ಟ್ ಮೇಲೆ ಟೊರಂಟೋದಲ್ಲಿ ದಾಳಿ ನಡೆದಿರುವ ವಿಷಯ ಕೇಳಿ ತುಂಬಾ ಶಾಕ್ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿನಿ ಕುಟುಂಬಕ್ಕೆ ಸಹಾಯ ಮಾಡುವಂತೆ ವಿದೇಶಾಂಗ ಇಲಾಖೆಗೆ ತಿಳಿಸಿರುವುದಾಗಿ ಸಚಿವ ಡಾ.ಎಸ್.ಜೈಶಂಕರ್ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT