ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎವರೆಸ್ಟ್‌ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧ

Last Updated 21 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಕಠ್ಮಂಡು: ಎವರೆಸ್ಟ್‌ ಪರ್ವತ ಪ್ರದೇಶದಲ್ಲಿ ಒಂದು ಬಾರಿ ಬಳಸಿ ಎಸೆಯು ವಂತಹ(ಸಿಂಗಲ್‌ ಯೂಸ್‌)ಪ್ಲಾಸ್ಟಿಕ್‌ ಬಳಕೆಯನ್ನು ನೇಪಾಳ ಸರ್ಕಾರ ನಿಷೇಧಿಸಿದೆ.

ಪರ್ವತ ಪ್ರದೇಶದಲ್ಲಿ ಅಂದಾಜು 10 ಟನ್ ಕಸ ಸಂಗ್ರಹವಾಗುತ್ತಿದೆ. ಎವರೆಸ್ಟ್‌ ಪರ್ವತವಿರುವ ಖುಂಬು ಪಸಂಗ್‌ ಲ್ಹಾಮು ಗ್ರಾಮೀಣಪ್ರದೇಶದ ವ್ಯಾಪ್ತಿಯಲ್ಲಿ, 30 ಮೈಕ್ರಾನ್‌ಗಿಂತ ಕಡಿಮೆಯ ಪ್ಲಾಸ್ಟಿಕ್ ಚೀಲ, ನೀರಿನ ಬಾಟಲ್‌ ಮುಂಬರುವ ಜನವರಿಯಿಂದ ನಿಷೇಧಿಸಲಾಗಿದೆ.

ಈ ಪ್ರದೇಶಕ್ಕೆ ಪ್ರತಿ ವರ್ಷ 50 ಸಾವಿರ ಚಾರಣಿಗರು, ಪರ್ವತಾರೋಹಿಗಳು ಭೇಟಿ ನೀಡುತ್ತಾರೆ.

ಸ್ಥಳೀಯ ಚಾರಣ ಸಂಸ್ಥೆ, ಏರ್‌ಲೈನ್‌ ಕಂಪನಿಗಳು ಮತ್ತು ನೇಪಾಳ ಪರ್ವತಾರೋಹಿಗಳ ಸಂಘದ ಸಹಯೋಗದಲ್ಲಿ ಸ್ಥಳೀಯ ಸಂಸ್ಥೆಗಳು ಕಾರ್ಯನಿರ್ವಹಿಸಲಿದ್ದು, ನಿಯಮ ಉಲ್ಲಂಘಿಸಿದರೆ ವಿಧಿಸುವ ದಂಡದ ಬಗ್ಗೆ ಇನ್ನೂ ನಿರ್ಧರಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT