ಗುರುವಾರ , ಡಿಸೆಂಬರ್ 3, 2020
19 °C

ಸೋಲ್‌: 70 ವರ್ಷದ ಬಳಿಕ ನಿರಪರಾಧಿ!

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಸೋಲ್‌: ‘ಬಂಡಾಯ ಪಡೆಗಳಿಗೆ ನೆರವು ನೀಡಿದ ಆರೋಪದಡಿ 70 ವರ್ಷದ ಹಿಂದೆ ಮರಣದಂಡನೆಗೆ ಗುರಿಯಾಗಿದ್ದ ವ್ಯಕ್ತಿ ನಿರಪರಾಧಿ. ತಪ್ಪಾಗಿ ಆತನನ್ನು ಶಿಕ್ಷೆಗೆ ಗುರಿಪಡಿಸಲಾಗಿತ್ತು’ ಎಂದು ದಕ್ಷಿಣ ಕೋರಿಯಾದ ಕೋರ್ಟ್‌ ಸೋಮವಾರ ಆದೇಶಿಸಿದೆ.

ಚಾಂಗ್‌ ಹ್ವಾನ್‌ ಬಾಂಗ್‌ ರನ್ನು ಮರಣೋತ್ತರವಾಗಿ ನಿರಪರಾಧಿ ಎಂದು ಕೋರ್ಟ್‌ ಘೋಷಿಸಿದೆ. ಘಟನೆ ನಡೆದಾಗ ಇವರಿಗೆ 29 ವರ್ಷ. ಯೆಒಸು ಮತ್ತು ಸುಂಚಿಯೊನ್ ನಗರಗಳಲ್ಲಿ ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದ ಪಡೆಗಳಿಗೆ ಬೆಂಬಲಿಸಿದ ಆರೋಪದ ಮೇಲೆ ಇವರು ಸೇರಿ ನೂರಾರು ಜನರನ್ನು 1948ರಲ್ಲಿ ಶಿಕ್ಷೆಗೆ ಗುರಿಪಡಿಸಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು