ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಗತಕ್ಕೆ 70 ಲಕ್ಷ ಜನ: ಡೊನಾಲ್ಡ್‌ ಟ್ರಂಪ್‌ ನಿರೀಕ್ಷೆ

Last Updated 12 ಫೆಬ್ರುವರಿ 2020, 18:24 IST
ಅಕ್ಷರ ಗಾತ್ರ

ವಾಷಿಂಗ್ಟನ್‌, ನವದೆಹಲಿ: ‘ಅಹಮದಾಬಾದ್‌ಗೆ ಭೇಟಿ ನೀಡುವ ವೇಳೆ ಸ್ವಾಗತ ಕೋರಲು ದಾರಿಯುದ್ದಕ್ಕೂ 50 ರಿಂದ 70 ಲಕ್ಷ
ಜನರು ಸೇರುವ ನಿರೀಕ್ಷೆಯಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶ್ವೇತಭವನದಲ್ಲಿ ಬುಧವಾರ ಸುದ್ದಿಗಾರರಿಗೆ ಹೇಳಿದರು.

ಟ್ರಂಪ್‌ಹಾಗೂ ಅವರ ಪತ್ನಿ ಮೆಲಾನಿಯಾ ಟ್ರಂಪ್‌ಎರಡು ದಿನಗಳ ಪ್ರವಾಸಕ್ಕೆ ಫೆ.24ರಂದು ಭಾರತಕ್ಕೆ ಆಗಮಿಸಲಿದ್ದಾರೆ. ಅಧ್ಯಕ್ಷೀಯ ಚುನಾವಣೆ ದೃಷ್ಟಿಯಿಂದ ಈ ಪ್ರವಾಸ ಮಹತ್ವಪೂರ್ಣವಾಗಿರಲಿದೆ ಎನ್ನಲಾಗಿದ್ದು, ಅಮೆರಿಕದಲ್ಲಿರುವ ಭಾರತೀಯ ಸಂಜಾತರನ್ನು ಸೆಳೆಯಲು ಇದು ಸಹಕಾರಿಯಾಗಲಿದೆ.

‘ಹೌಡಿ ಮೋದಿ’ ಮಾದರಿ ಕಾರ್ಯಕ್ರಮ: ಅಹಮದಾಬಾದ್‌ಗೆ ಫೆ.24ಕ್ಕೆಭೇಟಿ ನೀಡಲಿರುವ ಟ್ರಂಪ್‌, ವಿಮಾನ ನಿಲ್ದಾಣದಿಂದ ಅದ್ಧೂರಿ ರೋಡ್‌ಶೋ ಮೂಲಕ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ‘ಈ ಸಂದರ್ಭದಲ್ಲಿ ದಾರಿಯ ಇಕ್ಕೆಲಗಳಲ್ಲಿ 50–70 ಲಕ್ಷ ಜನರಿರಲಿದ್ದಾರೆ ಎಂದು ಮೋದಿ ಅವರು ತಿಳಿಸಿದ್ದಾರೆ’ ಎಂದು ಟ್ರಂಪ್‌ ಹೇಳಿದರು.

ಈ ವೇಳೆ ‌ನೂತನವಾಗಿ ನಿರ್ಮಾಣವಾಗಿರುವ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಕ್ರಿಕೆಟ್‌ ಮೈದಾನವನ್ನು ಟ್ರಂಪ್‌ ಉದ್ಘಾಟಿಸಲಿದ್ದಾರೆ. ‘ಕೆಮ್‌ ಚೊ ಟ್ರಂಪ್‌’ ಹೆಸರಿನ ಕಾರ್ಯಕ್ರಮದಲ್ಲಿ ಟ್ರಂಪ್‌ ಮಾತನಾಡಲಿದ್ದು, ‘ಈ ಮೈದಾನದಲ್ಲಿ ಏಕಕಾಲದಲ್ಲಿ 1.10 ಲಕ್ಷ ಜನರು ಕುಳಿತುಕೊಳ್ಳಲು ಅವಕಾಶವಿದ್ದು, ಆಸ್ಟ್ರೇಲಿಯಾದ ಮೆಲ್ಬರ್ನ್‌ ಕ್ರಿಕೆಟ್‌ ಮೈದಾನಕ್ಕಿಂತ ದೊಡ್ಡದಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT