‘ಹವಾಮಾನ ವೈಪರೀತ್ಯ ತಡೆಗೆ ಮಹತ್ವದ ಬದಲಾವಣೆ ಅವಶ್ಯ’

7
ಎಚ್ಚರಿಕೆ ನೀಡಿರುವ ವಿಶ್ವಸಂಸ್ಥೆ

‘ಹವಾಮಾನ ವೈಪರೀತ್ಯ ತಡೆಗೆ ಮಹತ್ವದ ಬದಲಾವಣೆ ಅವಶ್ಯ’

Published:
Updated:
Deccan Herald

ಇಂಚನ್ (ದಕ್ಷಿಣ ಕೊರಿಯಾ): ಜಾಗತಿಕ ಮಟ್ಟದಲ್ಲಿ ಹವಾಮಾನ ವೈಪರೀತ್ಯ ತಡೆಗಟ್ಟಲು ಸಮಯ ಮೀರಿಹೋಗುತ್ತಿದೆ ಎಂದು ಎಚ್ಚರಿಕೆ ನೀಡಿರುವ ವಿಶ್ವಸಂಸ್ಥೆ, ವಿಪತ್ತು ತಡೆಗಟ್ಟಬೇಕೆಂದರೆ ಹಿಂದೆಂದೂ ಆಗದ ಮಟ್ಟದಲ್ಲಿ ಪ್ರಮುಖ ಸಾಮಾಜಿಕ ಹಾಗೂ ಜಾಗತಿಕ ಆರ್ಥಿಕ ಬದಲಾವಣೆಗಳು ಆಗಬೇಕಾಗುತ್ತವೆ ಎಂದು ಹೇಳಿದೆ.

ಭೂಮಿಯ ಮೇಲ್ಮೈ ತಾಪಮಾನ 1 ಡಿಗ್ರಿ ಸೆಲ್ಸಿಯಸ್‌ ತಲುಪಿದೆ. ಇದರಿಂದ ಪ್ರವಾಹ, ಬರಗಾಲ ಹಾಗೂ ಸಮುದ್ರದಲ್ಲಿ ತೀವ್ರ ಒತ್ತಡಕಾರಿಯಾದ ಚಂಡಮಾರುತ ಉಂಟಾಗುವ ಅಪಾಯ ಇದೆ ಎಂದು ‘ಹವಾಮಾನ ಬದಲಾವಣೆಯ ಅಂತರ್‌ಸರ್ಕಾರದ ಸಮಿತಿ’ (ಐ‍‍ಪಿಸಿಸಿ) ವರದಿಯಲ್ಲಿ ವಿಶ್ವಸಂಸ್ಥೆಯನ್ನು ಉಲ್ಲೇಖಿಸಿ ಹೇಳಲಾಗಿದೆ.

ಅಲ್ಲದೆ ಭೂಮಿಯ ಮೇಲ್ಮೈ ತಾಪಮಾನ 3ರಿಂದ 4 ಡಿಗ್ರಿ ಸೆಲ್ಸಿಯಸ್ ತಲುಪುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದೂ ತಿಳಿಸಲಾಗಿದೆ.

ಜಾಗತಿಕ ತಾಪಮಾನದಿಂದ ಉಂಟಾಗುತ್ತದೆ ಎಂದು ಅಂದಾಜಿಸಿದ್ದ ಸಂಕಷ್ಟ ಅವಧಿಗೆ ಮೊದಲೇ ಎದುರಾಗಿದೆ ಹಾಗೂ ಹೆಚ್ಚು ತೀವ್ರವಾಗಿ ಬಾಧಿಸುತ್ತಿದೆ ಎನ್ನುವುದು ಈ ವರದಿಯಿಂದ ತಿಳಿಯುತ್ತಿದೆ.

‘ಭವಿಷ್ಯದಲ್ಲಿ ಆಗಬಹುದು ಎಂದು ವಿಜ್ಞಾನಿಗಳು ಊಹಿಸಿದ್ದ ಸಂಗತಿಗಳು ಈಗಲೇ ಸಂಭವಿಸುತ್ತಿವೆ’ ಎಂದು ಗ್ರೀನ್‌ಪೀಸ್‌ ಇಂಟರ್‌ನ್ಯಾಷನಲ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಜೆನಿಫರ್ ಮಾರ್ಗನ್ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !