ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರಾಚ್ಯಕ್ಕೆ 3500 ಸೈನಿಕರನ್ನು ರವಾನಿಸಲು ಅಮೆರಿಕ ನಿರ್ಧಾರ

Last Updated 4 ಜನವರಿ 2020, 2:01 IST
ಅಕ್ಷರ ಗಾತ್ರ

ವಾಷಿಂಗ್‌ಟನ್: ಕುವೈತ್‌ನಲ್ಲಿರುವಸೇನಾ ನೆಲೆಗಳಿಗೆ ಅಮೆರಿಕ 3,500 ಸೈನಿಕರನ್ನು ಹೆಚ್ಚುವರಿಯಾಗಿ ರವಾನಿಸುವ ಮೂಲಕ, ಇರಾನ್‌ನೊಂದಿಗಿನ ಸಂಭಾವ್ಯ ಘರ್ಷಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಬಾಗ್ದಾದ್‌ನ ಅಮೆರಿಕ ರಾಯಭಾರ ಕಚೇರಿ ಮೇಲೆ ಇರಾನ್‌ ಬೆಂಬಲಿತರು ದಾಳಿ ನಡೆಸಿದ ನಂತರ ಅಮೆರಿಕ ಮಧ್ಯಪ್ರಾಚ್ಯದ ವಿವಿಧೆಡೆ ಇರುವ ತನ್ನ ಸೇನಾ ನೆಲೆಗಳಿಗೆ ಹೆಚ್ಚುವರಿಯಾಗಿ ಸೈನಿಕರನ್ನು ನಿಯೋಜಿಸುವ ಕಾರ್ಯ ಆರಂಭಿಸಿತ್ತು.

ಸೇನೆಗೆ ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಅಮೆರಿಕ ಸೂಚಿಸಿದೆ. 82ನೇ ಏರ್‌ಬೋರ್ನ್‌ ಇಮ್ಮಿಡಿಯಟ್ ರೆಸ್ಪಾನ್ಸ್‌ ಫೋರ್ಸ್‌ ಬ್ರಿಗೇಡ್‌ನ ಸೈನಿಕರಿಗೆ ‘ನಿಮ್ಮನ್ನುಮಧ್ಯಪ್ರಾಚ್ಯದ ನೆಲೆಗಳಿಗೆ ರವಾನೆ ಮಾಡಲಾಗುವುದು’ ಎಂದು ಮಾಹಿತಿ ನೀಡಿದೆ.

‘ಕುವೈತ್‌ನ ನೆಲೆಯಲ್ಲಿ ಅಮೆರಿಕ ಸೈನಿಕರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದೆ. ಅಮೆರಿಕ ಮತ್ತು ಇರಾನ್‌ ನಡುವಣ ಸಂಘರ್ಷ ನಿರ್ಣಾಯಕ ಹಂತ ತಲುಪಬಹುದು ಎನ್ನುವ ಲೆಕ್ಕಾಚಾರ ಮತ್ತು ಮಧ್ಯಪ್ರಾಚ್ಯದಲ್ಲಿ ಇರಾನ್‌ ಹೊಂದಿರುವ ಪ್ರಭಾವ ಕಡಿಮೆ ಮಾಡಬೇಕು ಎನ್ನುವ ನಿರ್ಧಾರದ ಹಿನ್ನೆಲೆಯಲ್ಲಿ ಸೈನಿಕ ಬಲ ಹೆಚ್ಚಿಸಿಕೊಳ್ಳುವುದು ಮಹತ್ವದ ಹೆಜ್ಜೆ’ ಎಂದು ಅಮೆರಿಕ ಸೇನಾಧಿಕಾರಿಗಳು ಹೇಳಿದ್ದಾರೆ.

ಖಾಸಿಂ ಸುಲೇಮಾನಿ ಹತ್ಯೆಯ ನಂತರ ಎರಡೂ ದೇಶಗಳ ಸಂಬಂಧ ಬಿಗಡಾಯಿಸಿದ್ದು, ಯಾವಾಗ ಏನು ಬೇಕಾದರೂ ಆಗಬಹುದು ಎನ್ನುವ ಆತಂಕ ವ್ಯಕ್ತವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT