ಶನಿವಾರ, ಜೂನ್ 6, 2020
27 °C

ಭಾರತ–ಚೀನಾ ಗಡಿ ಕುರಿತ ಅಮೆರಿಕದ ಟೀಕೆ ಅಸಂಬದ್ಧ: ಚೀನಾ

ಪಿಟಿಐ Updated:

ಅಕ್ಷರ ಗಾತ್ರ : | |

ಬೀಜಿಂಗ್: ಭಾರತ–ಚೀನಾದ ಗಡಿಯ ವಿಚಾರದಲ್ಲಿ ಅಮೆರಿಕದ ರಾಜತಾಂತ್ರಿಕರ ಟೀಕೆಗಳು ಅಸಂಬದ್ಧವಾಗಿವೆ ಎಂದು ಚೀನಾ ಗುರುವಾರ ಹೇಳಿದೆ.

‘ಭಾರತದ ಗಡಿಯಲ್ಲಿ ಚೀನಾ ನಿರಂತರ ಅಕ್ರಮಣಶೀಲತೆ ಮತ್ತು ಯಥಾಸ್ಥಿತಿಯನ್ನು ಬದಲಿಸಲು ಯತ್ನಿಸುತ್ತದೆ. ಇದನ್ನು ವಿರೋಧಿಸಬೇಕಾಗಿದೆ’ ಎಂದು ಅಮೆರಿಕದ ದಕ್ಷಿಣ ಹಾಗೂ ಮಧ್ಯ ಏಷ್ಯಾದ ಹಿರಿಯ ರಾಜತಾಂತ್ರಿಕ ಅಲಿಸ್ ಜಿ. ವೆಲ್ಸ್‌ ಬುಧವಾರ ಅಟ್ಲಾಂಟಿಕ್ ಕೌನ್ಸಿಲ್ ಥಿಂಕ್ ಟ್ಯಾಂಕ್‌ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. 

ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜಾಹೊ ಲಿಜಿಯಾನ್, ‘ಭಾರತ–ಚೀನಾ ಗಡಿ ವಿಚಾರದಲ್ಲಿ ಚೀನಾದ ನಿಲುವು ಸ್ಥಿರ ಮತ್ತು ಸ್ಪಷ್ಟವಾಗಿದೆ. ಅಮೆರಿಕದ ಹಿರಿಯ ರಾಜತಾಂತ್ರಿಕರ ಟೀಕೆಗಳು ಕೇವಲ ಅಸಂಬದ್ಧವಾಗಿವೆ’ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು