ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾತ್ಮ ಗಾಂಧಿ ಸ್ಮಾರಕ: ಭಾರತ ನಂತರ ಅಮೆರಿಕದಲ್ಲಿ ಅತಿ ಹೆಚ್ಚು

Last Updated 27 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ವಾಷಿಂಗ್ಟನ್‌ : ಭಾರತ ಹೊರತುಪಡಿಸಿ ವಿಶ್ವದಲ್ಲೇ ಅತಿ ಹೆಚ್ಚು ಮಹಾತ್ಮ ಗಾಂಧಿ ಪ್ರತಿಮೆ ಮತ್ತು ಸ್ಮಾರಕ ಗಳಿರುವ ದೇಶ ಅಮೆರಿಕ ಆಗಿದೆ. ವಿಶೇಷವೆಂದರೆ ಅಮೆರಿಕಕ್ಕೆ ಗಾಂಧಿ ಒಮ್ಮೆಯೂ ಭೇಟಿ ನೀಡಿರಲಿಲ್ಲ.

‘ದೇಶದ ವಿವಿಧ ಭಾಗಗಳಲ್ಲಿ ಗಾಂಧಿ ಅವರ 24 ಪ್ರಮುಖ ಪ್ರತಿಮೆಗಳಿದ್ದು, ಹಲವು ಸಮುದಾಯ ಮತ್ತು ಸೇವಾ ಸಂಸ್ಥೆಗಳು ಅವರ ತತ್ವವನ್ನು ಅಳವಡಿಸಿಕೊಂಡಿವೆ. ವಾಷಿಂಗ್ಟನ್‌ನ ಬೆಥೆಸ್ಡಾದಲ್ಲಿ ಇರುವ ‘ಗಾಂಧಿ ಸ್ಮಾರಕ ಕೇಂದ್ರ’ ಅಮೆರಿಕದ ಮೊದಲ ಗಾಂಧಿ ನೆನಪಿನ ಸ್ಮಾರಕವಾಗಿದೆ’ ಎಂದು ಭಾರತೀಯ ಸಂಜಾತ ಅಮೆರಿಕ ಪ್ರಜೆ ಸುಭಾಷ್‌ ರಾಜ್‌ಧನ್‌ ಮಾಹಿತಿ ನೀಡಿದ್ದಾರೆ.

‘ನ್ಯೂಯಾರ್ಕ್‌ನ ಯೂನಿಯನ್‌ ಸ್ಕ್ವೇರ್‌ ಉದ್ಯಾನದಲ್ಲಿ ಗಾಂಧಿ ಪ್ರತಿಮೆಯನ್ನು 1986ರಲ್ಲಿ ಸ್ಥಾಪಿಸಲಾಗಿದ್ದು, ದೇಶದ ಮೊದಲ ಗಾಂಧಿ ಪ್ರತಿಮೆ ಎನಿಸಿಕೊಂಡಿದೆ. ಭಾರತದ ರಾಯಭಾರ ಕಚೇರಿಗಳೂ ಬಾಪೂ ಅವರ ಪ್ರತಿಮೆಗಳನ್ನು ಹೊಂದಿವೆ’ ಎಂದು ತಿಳಿಸಿದ್ದಾರೆ.

‘ಮಾಜಿ ಅಧ್ಯಕ್ಷ ಬರಾಕ್‌ ಒಬಾಮ, ಸಂಸತ್ತಿನ ಸ್ಪೀಕರ್‌ ನ್ಯಾನ್ಸಿ ಪೆಲೊಸಿ ಸೇರಿದಂತೆ ಹಲವರು ಗಾಂಧಿತತ್ವ ಪಾಲಕರಾಗಿದ್ದಾರೆ. ಮಾರ್ಟಿನ್‌ ಲೂಥರ್‌ ಕಿಂಗ್‌ ಜೂನಿಯರ್‌ ಅವರು ಗಾಂಧಿತತ್ವಗಳಿಂದ ಪ್ರಭಾವಿತರಾಗಿದ್ದರಿಂದ ಅಮೆರಿಕನ್ನರಲ್ಲಿ ಗಾಂಧಿ ಕುರಿತು ಕುತೂಹಲ ಹೆಚ್ಚಾಗಲು ಕಾರಣ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT