ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ 19: ಚೀನಾವನ್ನು ಹಿಂದಿಕ್ಕಿದ ಅಮೆರಿಕ

Last Updated 27 ಮಾರ್ಚ್ 2020, 4:15 IST
ಅಕ್ಷರ ಗಾತ್ರ

ವಾಷಿಂಗ್ಟನ್‌ ಡಿಸಿ: ಜಗತ್ತಿನಲ್ಲೇ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ಅಮೆರಿಕ ಚೀನಾವನ್ನು ಹಿಂದಿಕ್ಕಿದೆ. ಸದ್ಯ ಅಮೆರಿಕದಲ್ಲಿ 82404 ಮಂದಿ ಸೋಂಕಿತರಿದ್ದಾರೆ.

ಕೋವಿಡ್‌ ಕುರಿತ ಅಂಕಿ ಸಂಖ್ಯೆಗಳನ್ನು, ವಿವರಗಳನ್ನು ನೀಡುವ ಜಾನ್ಸ್‌ ಹಾಕಿನ್ಸ್‌ ವಿಶ್ವವಿದ್ಯಾಲಯದ ವೆಬ್‌ಸೈನಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ಗಮನಿಸಬೇಕಾದ ಪ್ರಮುಖ ವಿಷಯವೇನೆಂದರೆ, ಅಮೆರಿಕ ಅತಿ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಕೊರೊನಾ ವೈರಸ್‌ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸುತ್ತಿದೆ. ಇದು ಕೊರೊನಾ ಸೋಂಕಿತ ಯಾವುದೇ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಪರೀಕ್ಷೆಗಿಂತಲೂ ದೊಡ್ಡ ಪ್ರಮಾಣದ್ದು.

‘ನಾವು ಈ ವರೆಗೆ 3.70 ಲಕ್ಷ ಮಂದಿಯನ್ನು ಪರೀಕ್ಷೆ ಮಾಡಿದ್ದೇವೆ. 2.20 ಲಕ್ಷ ಮಂದಿಯನ್ನು ಕೇವಲ 8 ದಿನಗಳಲ್ಲಿ ಪರೀಕ್ಷಿಸಿದ್ದೇವೆ. ಬೇರೆ ದೇಶಗಳು 8 ವಾರಗಳಲ್ಲಿ ಮಾಡಿದ್ದನ್ನು ನಾವು ಕೇವಲ 8 ದಿನಗಳಲ್ಲಿ ಮಾಡಿದ್ದೇವೆ,’ ಎಂದು ಕೊರೊನಾ ವೈರಸ್‌ ಪ್ರತಿಕ್ರಿಯೆಗಳಿಗೆ ವೈಟ್‌ ಹೌಸ್‌ನಲ್ಲಿ ನಿಯೋಜನೆಗೊಂಡಿರುವ ಡಾ. ಡಿಬೋರಾ ಬ್ರಿಕ್ಸ್‌ ಹೇಳಿದ್ದಾರೆ.

ಕೊರೊನಾ ವೈರಸ್‌ ವಿರುದ್ಧ ಕ್ಷಿಪ್ರವಾಗಿ, ದೊಡ್ಡ ಮಟ್ಟದಲ್ಲಿ ಹೋರಾಡುತ್ತಿದ್ದರೂ ಸೋಂಕಿನ ಪ್ರಮಾಣ ಮಾತ್ರ ಅಮೆರಿಕದಲ್ಲಿ ವ್ಯಾಪಿಸುತ್ತಲೇ ಇದೆ. ಹೀಗಾಗಿ ಅಮೆರಿಕ ಚೀನಾವನ್ನು ಹಿಂದಿಕ್ಕಿ ಮುಂದೆ ಬಂದಿದೆ. ಚೀನಾದ ಒಟ್ಟು ಸೋಂಕಿತರ ಸಂಖ್ಯೆ 81782. ಇದಕ್ಕೆ ಪ್ರತಿಯಾಗಿ ಅಮೆರಿಕ 82404 ಸೋಂಕಿತರಿದ್ದಾರೆ.

ಅಮೆರಿಕದಲ್ಲಿ ಸೋಂಕಿನಿಂದಾಗಿ ಈ ವರೆಗೆ 1300 ಮಂದಿ ಮೃತಪಟ್ಟಿದ್ದಾರೆ.

ಇದೇ ವೇಳೆ ಇಟಲಿಯಲ್ಲಿ 62013 ಮಂದಿ ಸೋಂಕಿಗೀಡಾಗಿದ್ದು, 8215ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT