ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಅಮೆರಿಕದಲ್ಲಿ ಮತ್ತೆ 1,514 ಮಂದಿ ಸಾವು, 5.55 ಲಕ್ಷ ದಾಟಿದ ಪ್ರಕರಣಗಳು

Last Updated 13 ಏಪ್ರಿಲ್ 2020, 2:39 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಕೊರೊನಾ ವೈರಸ್‌ ಸೋಂಕಿನಿಂದಾಗಿ ಕಳೆದ 24 ಗಂಟೆಗಳಲ್ಲಿ ಅಮೆರಿಕದಲ್ಲಿ 1,514 ಮಂದಿ ಸಾವಿಗೀಡಾಗಿರುವುದಾಗಿ ಜಾನ್ಸ್‌ ಹಾಪ್‌ಕಿನ್ಸ್‌ ಯೂನಿವರ್ಸಿಟಿ ಮಾಹಿತಿಗಳಿಂದ ತಿಳಿದು ಬಂದಿದೆ.

ಶನಿವಾರ ಅಮೆರಿಕದಲ್ಲಿ 1,920 ಮಂದಿ ಕೋವಿಡ್‌–19 ರೋಗಿಗಳು ಸಾವಿಗೀಡಾಗಿದ್ದರು. ಅಮೆರಿಕದ ಕಾಲಮಾನದ ಪ್ರಕಾರ, ಭಾನುವಾರ ರಾತ್ರಿ 8:30ರ ವರೆಗೂ ಕೊರೊನಾ ವೈರಸ್‌ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 22,020 ಮುಟ್ಟಿದೆ. ವಿಶ್ವದ ಯಾವುದೇ ರಾಷ್ಟ್ರಗಳಿಗಿಂತ ಅತ್ಯಧಿಕ ಸಾವು ಅಮೆರಿಕದಲ್ಲಿ ದಾಖಲಾಗಿದೆ.

ಕೋವಿಡ್‌–19 ಗಂಭೀರ ಪರಿಣಾಮ ಬೀರುತ್ತಿರುವುದರಿಂದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ಅಮೆರಿಕದ ಎಲ್ಲ 50 ರಾಜ್ಯಗಳಲ್ಲಿಯೂ ರಾಷ್ಟ್ರೀಯ ತುರ್ತುಸ್ಥಿತಿ ಘೋಷಿಸಿದ್ದು, ತುರ್ತು ಕಾರ್ಯಾಚರಣೆಗಳಿಗಾಗಿ 50 ಸಾವಿರ ಯೋಧರನ್ನು ನಿಯೋಜಿಸಿದ್ದಾರೆ.

ಅಮೆರಿಕದಲ್ಲಿ ಸೋಂಕು ದೃಢಪಟ್ಟಿರುವ 24,718ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು 5,55,313 ಜನರಿಗೆ ಸೋಂಕು ತಗುಲಿದೆ. ವಿಶ್ವದ ಆರ್ಥಿಕ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ನ್ಯೂಯಾರ್ಕ್‌ ಕೊರೊನಾ ವೈರಾಣುವಿನ ಕೇಂದ್ರ ಸ್ಥಾನವಾಗಿ ಪರಿಣಮಿಸಿದೆ. ಇಲ್ಲಿ ಈಗಾಗಲೇ 9,566 ಮಂದಿ ಸತ್ತಿದ್ದರೆ, 1,88,694 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಜಗತ್ತಿನಾದ್ಯಂತ 18,54,654 ಕೋವಿಡ್‌–19 ಪ್ರಕರಣಗಳು ವರದಿಯಾಗಿವೆ. ಸೋಂಕಿನಿಂದಾಗಿ ಸಾವಿಗೀಡಾದವರ ಸಂಖ್ಯೆ 1,14,358 ತಲುಪಿದೆ. ಈವರೆಗೆ 4,27,379 ಮಂದಿ ಗುಣಮುಖರಾಗಿದ್ದಾರೆ. ಇಟಲಿಯಲ್ಲೂ ಸಾವಿನಿ ಓಟ ಮುಂದುವರಿದಿದ್ದು, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 19,899 ಮುಟ್ಟಿದೆ. ಒಟ್ಟು ಕೊರೊನಾ ಸೋಂಕು ಪ್ರಕರಣಗಳು 1,56,363.

ಭಾರತದಲ್ಲಿ ಭಾನುವಾರದ ವರೆಗೂ ಕೊರೊನಾ ಸೋಂಕಿತರ ಒಟ್ಟಾರೆ ಸಂಖ್ಯೆ 8,447ಕ್ಕೆ ತಲುಪಿದೆ. 273 ಮಂದಿ ಸಾವಿಗೀಡಾಗಿದ್ದು, ಈವರೆಗೆ 716 ಮಂದಿ ಚೇತರಿಸಿಕೊಂಡಿದ್ದಾರೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT