₹24,797 ಕೋಟಿದೇಣಿಗೆ ನೀಡಿದ ವಾರನ್ ಬಫೆಟ್

ನ್ಯೂಯಾರ್ಕ್ (ರಾಯಿಟರ್ಸ್): ವಾರನ್ ಬಫೆಟ್ ಅವರು ತಮ್ಮ ಬರ್ಕ್‌ಶೀರ್ ಹಾಥ್‌ವೇ ಇಂಕ್ ಕಂಪೆನಿಯಿಂದ ಬಿಲ್ ಹಾಗೂ ಮೆಲಿಂದಾ ಗೇಟ್ಸ್ ಫೌಂಡೇಷನ್ ಸೇರಿದಂತೆ ಐದು ದತ್ತಿ ಸಂಸ್ಥೆಗಳಿಗೆ ₹24,797 ಕೋಟಿ ದೇಣಿಗೆ ನೀಡಲಿದ್ದಾರೆ.
ಇದು ಬಫೆಟ್ ಅವರ 14ನೇ ವಾರ್ಷಿಕ ದೇಣಿಗೆಯಾಗಿದೆ ಎಂದು ಬರ್ಕ್‌ಶೀರ್ ತಿಳಿಸಿದೆ.
ಕಂಪೆನಿಯಲ್ಲಿರುವ ತಮ್ಮ ಷೇರುಗಳನ್ನು ದೇಣಿಗೆ ನೀಡುವುದಾಗಿ ಬಫೆಟ್ ಅವರು 2006ರಲ್ಲಿ ಘೋಷಿಸಿದ ಬಳಿಕ ಈವರೆಗೆ ಅವರು ₹ 2.37 ಲಕ್ಷ ಕೋಟಿಗೂ ಹೆಚ್ಚು ಹಣ ದಾನ ಮಾಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.