ಜಿನೀವಾ (ಎಎಫ್‌ಪಿ): ಹವಾಮಾನ ವೈಪರೀತ್ಯ ಉಲ್ಬಣಗೊಳ್ಳುತ್ತಿರುವ ಕಾರಣ ಮುಂದಿನ 10 ವರ್ಷಗಳಲ್ಲಿ ಉತ್ಪಾದಕತೆ ಕಡಿಮೆಯಾಗಲಿದೆ. ಇದರಿಂದಾಗುವ ನಷ್ಟವು 800 ಲಕ್ಷ ಪೂರ್ಣಾವಧಿ ಉದ್ಯೋಗಗಳಿಗೆ ಸಮವಾಗಿರುತ್ತದೆ ಎಂದು ವಿಶ್ವಸಂಸ್ಥೆ ಸೋಮವಾರ ಎಚ್ಚರಿಕೆ ನೀಡಿದೆ.

ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ಐಎಲ್‌ಒ) ವರದಿಯಲ್ಲಿ 2030ರಲ್ಲಿ ಹೆಚ್ಚಿನ ತಾಪಮಾನದಿಂದಾಗಿ ವಿಶ್ವದಾದ್ಯಂತ ಒಟ್ಟು ಕೆಲಸದ ಸಮಯದ ಶೇ 2.2 ರಷ್ಟು ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. ಪಶ್ಚಿಮ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾ
ದಲ್ಲಿ ಎರಡು ಪಟ್ಟು ಹೆಚ್ಚು ಹಾನಿಯಾಗಬಹುದು ಎಂದು ನಿರೀಕ್ಷಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಉಷ್ಣತೆಯ ಒತ್ತಡದಿಂದ ಉಂಟಾಗುವ ಆರ್ಥಿಕ ನಷ್ಟವು ಈಗಾಗಲೇ ಅಸ್ತಿತ್ವದಲ್ಲಿರುವ ಆರ್ಥಿಕ ಅನನುಕೂಲತೆಯನ್ನು ಹೆಚ್ಚಿಸುತ್ತ ಎಂದು ವರದಿಯ ಸಹ ಲೇಖಕ ಕ್ಯಾಥರೀನ್ ಸಗೆಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಆದ್ದರಿಂದ, ಉಷ್ಣತೆಯ ಒತ್ತಡದ ಅಪಾಯ
ಗಳನ್ನು ಪರಿಹರಿಸಲು ಮತ್ತು ಕಾರ್ಮಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ನೀತಿಗಳನ್ನು ರೂಪಿಸಲು ಹೆಚ್ಚಿನ ಪ್ರಯತ್ನ ಮಾಡಬೇಕು ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.