ಶುಕ್ರವಾರ, ಡಿಸೆಂಬರ್ 13, 2019
20 °C

ಸ್ಕಾಟ್‌ಲೆಂಡ್‌ : ಮೃತ ತಿಮಿಂಗಿಲ ಉದರದೊಳಗೆ 100 ಕೆ.ಜಿ ತ್ಯಾಜ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಕಾಟ್‌ಲೆಂಡ್‌ : ಇಲ್ಲಿನ ಕಡಲತೀರದಲ್ಲಿ ಸತ್ತು ಬಿದ್ದಿದ್ದ ತಿಮಿಂಗಿಲದ ಉದರದಲ್ಲಿ ಸುಮಾರು 100 ಕೆ.ಜಿ.ಯಷ್ಟು ಪ್ಲಾಸ್ಟಿಕ್‌ ಪತ್ತೆಯಾಗಿವೆ.

ಸ್ಕಾಟ್‌ಲೆಂಡ್‌ನ ಇಸ್‌ಲೆ ಅಫ್‌ ಹ್ಯಾರಿಸ್‌ನಲ್ಲಿ 20 ಟನ್‌ ಗಾತ್ರದ ತಿಮಿಂಗಿಲ ಮೃತಪಟ್ಟಿದ್ದು ಅದರ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಲೊಟ, ಹಗ್ಗದ ಕಟ್ಟು ಗಳು, ಮೀನು ಹಿಡಿಯುವ ಬಲೆ, ಹೀಗೆ ಸುಮಾರು 100 ಕೆ.ಜಿ ತ್ಯಾಜ್ಯ ವಸ್ತುಗಳು ದೊರೆತಿದೆ. ಸಮುದ್ರ ಮಾಲಿನ್ಯದಿಂದಾಗಿ ತಿಮಿಂಗಿಲದ ಸಾವು ಸಂಭವಿಸಿದೆ ಎಂದು ಸ್ಥಳೀಯರು ಭಾವಿಸಿರುದಾಗಿ ಬಿಬಿಸಿ ವರದಿ ಮಾಡಿದೆ.

ಮೃತ ತಿಮಿಂಗಿಲದ ಹೊಟ್ಟೆಯೊಳಗೆ ದೊರೆತ ಅವಶೇಷಗಳನ್ನು ಕಂಡು ಬೇಸರವಾಗಿದೆ ಎಂದು ಸ್ಥಳೀಯ ಡ್ಯಾನ್ ಪೆರ್‍ರೆ ಬಿಬಿಸಿ  ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ತಿಮಿಂಗಿಲ ಮತ್ತು ಡಾಲ್ಫಿನ್‌ಗಳ ಬಗ್ಗೆ ಅಧ್ಯಯನ ನಡೆಸುವ ಸ್ಕಾಟಿಷ್‌ ಮರೇನ್‌ ಎನಿಮಲ್‌ ಸ್ಕೀಮ್‌(ಸಿಎಂಎಎಸ್‌ಎಸ್‌) ಸಂಘಟನೆಯು ಮೃತ ತಿಮಿಂಗಿದ ಚಿತ್ರವನ್ನು ತನ್ನ ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿದ್ದು ಮೃತ ತಿಮಿಂಗಿಲದ ಹೊಟ್ಟೆಯೊಳಗೆ 100 ಕೆಜಿ ಸಮುದ್ರದ ತ್ಯಾಜ್ಯ ವಸ್ತುಗಳಿದ್ದವು ಎಂದು ಹೇಳಿದೆ. 

ತಿಮಿಂಗಿಲ ಮೀನಿನ ಹೊಟ್ಟೆಯಲ್ಲಿ ದೊರೆತಿರುವ ಪ್ಲಾಸ್ಟಿಕ್‌ ಸಂಗ್ರಹ ಭಯಾನಕವಾಗಿವೆ, ಇದರಿಂದಾಗಿ ಮೀನಿನ  ಜೀರ್ಣಕ್ರಿಯೆಯಲ್ಲಿ  ಸಮಸ್ಯೆಯಾಗಿ ಸಾವು ಸಂಭವಿಸಿರಬಹುದು ಎಂದು ಸಿಎಂಎಎಸ್‌ಎಸ್‌ ಸಂಘಟನೆಯು ಫೇಸ್‌ಬುಕ್‌ನಲ್ಲಿ ಬರೆದಿದೆ. 

2009ರಲ್ಲಿ ತಿಮಿಂಗಿಲಗಳ ಸಂಖ್ಯೆ 204 ಇದ್ದು 2019ರಲ್ಲಿ 938ಕ್ಕೆ ಏರಿಕೆ ಕಂಡಿದೆ ಎಂದು ಸಿಎಂಎಎಸ್‌ಎಸ್‌ ಸಂಸ್ಥೆಯ ವರದಿ ಮಾಡಿದೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು