ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್‌ನಲ್ಲಿ ಚೀನಾ ಹೂಡಿಕೆ

Last Updated 17 ಜನವರಿ 2020, 20:15 IST
ಅಕ್ಷರ ಗಾತ್ರ

ನೇ ಪಿ ಟೊ : ಮ್ಯಾನ್ಮಾರ್‌ ಪ್ರವಾಸದಲ್ಲಿರುವಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌, ಮ್ಯಾನ್ಮಾರ್‌ನಲ್ಲಿ ₹9.24 ಕೋಟಿ ವೆಚ್ಚದಲ್ಲಿ ಬಂದರು ನಿರ್ಮಾಣ ಸೇರಿದಂತೆಬೃಹತ್‌ ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಸಂಬಂಧ ಒಪ್ಪಂದ ಮಾಡಿಕೊಂಡಿದ್ದಾರೆ.

19 ವರ್ಷಗಳ ಬಳಿಕ ಚೀನಾ ಅಧ್ಯಕ್ಷರೊಬ್ಬರು ಮ್ಯಾನ್ಮಾರ್‌ಗೆ ಭೇಟಿ ನೀಡುತ್ತಿದ್ದು, ಮ್ಯಾನ್ಮಾರ್‌ ವಾಯುಪ್ರದೇಶದಕ್ಕೆ ಷಿ ಜಿನ್‌ಪಿಂಗ್ ಅವರು ಪ್ರಯಾಣಿಸುತ್ತಿದ್ದ ವಿಮಾನವು ಪ್ರವೇಶಿಸುತ್ತಿದ್ದಂತೆಯೇ ಎರಡು ಯುದ್ಧ ವಿಮಾನಗಳು ಬೆಂಗಾವಲು ನೀಡಿದವು. ವಿಮಾನ ನಿಲ್ದಾಣದಿಂದ ನಗರದವರೆಗೂ ಚೀನಾ–ಮ್ಯಾನ್ಮಾರ್‌ ಸಹಕಾರದ ಕುರಿತ ಬ್ಯಾನರ್‌ಗಳು, ಷಿ ಜಿನ್‌ಪಿಂಗ್‌ ಅವರ ಬೃಹತ್‌ ಚಿತ್ರಗಳನ್ನು ಹಾಕಲಾಗಿತ್ತು.

ಮ್ಯಾನ್ಮಾರ್‌ನಲ್ಲಿಬಂದರು ನಿರ್ಮಾಣಕ್ಕೆ ಸಹಕಾರ ನೀಡುವುದರ ಮೂಲಕ ಹಿಂದೂ ಮಹಾಸಾಗರದ ಮೇಲೆ ಚೀನಾ ಕಣ್ಣಿಟ್ಟಿದೆ. ಈಗಾಗಲೇ ಭಾರತದ ನೆರೆ ರಾಷ್ಟ್ರವಾದ ಪಾಕಿಸ್ತಾನದ ಗ್ವಾದರ್‌ ಬಂದರು ಹಾಗೂ ಶ್ರೀಲಂಕಾದ ಹಮ್‌ಬನ್‌ಟೊಟ ಬಂದರು ಚೀನಾ ವಶದಲ್ಲಿವೆ. ಈ ಭೇಟಿ ಮುಖಾಂತರ ಮ್ಯಾನ್ಮಾರ್ ಜೊತೆಗಿನ ಸಂಬಂಧವನ್ನು ಮತ್ತಷ್ಟು ಸದೃಢಗೊಳಿಸುವ ಭರವಸೆಯನ್ನು ಮ್ಯಾನ್ಮಾರ್‌ ನಾಯಕರಿಗೆ ಷಿ ನೀಡಿದರು ಎಂದು ಚೀನಾದ ಕ್ಸಿನ್‌ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT