ಮಂಗಳವಾರ, ಜೂನ್ 22, 2021
23 °C

17 ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಸಿಐಡಿಗೆ ಉಮೇಶ್‌ಕುಮಾರ್, ಗೃಹ ಇಲಾಖೆಗೆ ಡಿ.ರೂಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರಿನ ನಾಲ್ವರು ಡಿಸಿಪಿಗಳು, ಕಲಬುರ್ಗಿ ಹಾಗೂ ರಾಯಚೂರು ಎಸ್ಪಿ ಸೇರಿದಂತೆ 17 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.

ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಉಮೇಶ್‌ಕುಮಾರ್ ಅವರನ್ನು ಸಿಐಡಿ ಎಡಿಜಿಪಿ ಹುದ್ದೆಗೆ ವರ್ಗಾಯಿಸಲಾಗಿದೆ. ಗೃಹ ಇಲಾಖೆ ಕಾರ್ಯದರ್ಶಿ ಹುದ್ದೆಗೆ ಡಿ.ರೂಪಾ ಅವರನ್ನು ವರ್ಗಾವಣೆ ಮಾಡಲಾಗಿದೆ.

ಇತ್ತೀಚೆಗಷ್ಟೇ ಬೆಂಗಳೂರಿನ ನೂತನ ಕಮಿಷನರ್ ಆಗಿ ಕಮಲ್ ಪಂತ್ ಅಧಿಕಾರ ವಹಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ನಾಲ್ವರು ಡಿಸಿಪಿಗಳನ್ನೂ ವರ್ಗಾವಣೆ ಮಾಡಲಾಗಿದೆ.

ಕಲಬುರ್ಗಿ ಎಸ್ಪಿ ಆಗಿದ್ದ ಇಡಾ ಮಾರ್ಟಿನ್ ಅವರನ್ನು ನಕ್ಸಲ್ ನಿಗ್ರಹ ದಳಕ್ಕೆ ವರ್ಗಾಯಿಸಲಾಗಿದ್ದು, ಅವರ ಜಾಗಕ್ಕೆ ಸಿಮಿ ಮರಿಯಂ ಜಾರ್ಜ್‌ ಅವರನ್ನು ವರ್ಗಾವಣೆ ಮಾಡಲಾಗಿದೆ. ರಾಯಚೂರು ಎಸ್ಪಿ ಆಗಿದ್ದ ಸಿ.ಬಿ.ವೇದಮೂರ್ತಿ ಅವರನ್ನು ಗುಪ್ತದಳಕ್ಕೆ ವರ್ಗಾಯಿಸಲಾಗಿದ್ದು, ಅವರ ಸ್ಥಾನಕ್ಕೆ ನಿಕ್ಕಂ ಪ್ರಕಾಶ್ ಅವರು ವರ್ಗವಾಗಿದ್ದಾರೆ.

ವರ್ಗಾವಣೆಯಾದವರು:
ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌–ಎಸ್ಪಿ ನಕ್ಸಲ್ ನಿಗ್ರಹ ದಳ
ಸಿಮಿ ಮರಿಯಂ ಜಾರ್ಜ್– ಎಸ್ಪಿ ಕಲಬುರ್ಗಿ
ಸಿ.ಬಿ.ವೇದಮೂರ್ತಿ– ಗುಪ್ತದಳ, ಬೆಂಗಳೂರು
ನಿಕ್ಕಂ ಪ್ರಕಾಶ್ ಅಮೃತ್–‌ಎಸ್ಪಿ, ರಾಯಚೂರು
ಎಂ.ಎನ್.ಅನುಚೇತ್– ಡಿಸಿಪಿ, ಬೆಂಗಳೂರು ಕೇಂದ್ರ ವಿಭಾಗ
ಧರ್ಮೇಂದ್ರ ಕುಮಾರ್ ಮೀನಾ– ಡಿಸಿಪಿ ಉತ್ತರ ವಿಭಾಗ
ಹರೀಶ್ ಪಾಂಡೆ– ಡಿಸಿಪಿ, ದಕ್ಷಿಣ ವಿಭಾಗ
ಡಿ. ದೇವರಾಜ್– ಡಿಸಿಪಿ, ವೈಟ್‌ಫೀಲ್ಡ್ ವಿಭಾಗ
ಸಂಜೀವ್ ಪಾಟೀಲ – ಡಿಸಿಪಿ, ಪಶ್ಚಿಮ ವಿಭಾಗ
ಎನ್‌.ಶಶಿಕುಮಾರ್ – ಎಸ್ಪಿ, ವೈರ್‌ಲೆಸ್
ರೋಹಿಣಿ ಸೆಪೆಟ್ – ಎಸ್ಪಿ, ಸಿಐಡಿ
ಬಿ.ರಮೇಶ್– ಎಸ್ಪಿ, ಸಿಐಡಿ
ಇಳಕ್ಕಿಯಾ ಕರುಣಾಕರನ್– ಎಸ್ಪಿ, ಕೆಜಿಎಫ್‌
ಸುಮನ್ ಪೆನ್ನೆಕರ್ – ಉಪ ನಿರ್ದೇಶಕ, ಪೊಲೀಸ್ ಅಕಾಡೆಮಿ
ಎಂ.ಎಸ್. ಮೊಹಮ್ಮದ್ ಸುಜೀತ–ಡಿಸಿಪಿ, ಬೆಂಗಳೂರು ಸಿಎಆರ್.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು