ಸೋಮವಾರ, ಜುಲೈ 26, 2021
26 °C

ಕೋವಿಡ್ ಭೀತಿ: ಶವ ಸಂಸ್ಕಾರಕ್ಕೆ ಬಾರದ ಬಂಧುಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ (ಬೆಳಗಾವಿ ಜಿಲ್ಲೆ): ಪಟ್ಟಣದಲ್ಲಿ ಮೃತರಾದ ವ್ಯಕ್ತಿಯೊಬ್ಬರ ಅಂತಿಮಯಾತ್ರೆಗೆ ಸಂಬಂಧಿಕರು, ಆಪ್ತರು ಅಥವಾ ಸ್ಥಳೀಯರು ಬಾರದೆ ಕುಟುಂಬವೊಂದು ತಳ್ಳುವ ಗಾಡಿಯಲ್ಲಿ ಶವ ಸಾಗಿಸಿದ ಘಟನೆ ಗುರುವಾರ ನಡೆದಿದೆ. ಕೊರೊನಾ ಭೀತಿಯಿಂದಾಗಿ ಜನರು ನೆರವಿಗೆ ಧಾವಿಸಿಲ್ಲ ಎನ್ನಲಾಗುತ್ತಿದೆ.

ಇಲ್ಲಿನ ನಿವಾಸಿ ಸದಾಶಿವ ಹಿರಟ್ಟಿ(55) ಮೃತರು. ಸರ್ಕಾರಿ ಆಸ್ಪತ್ರೆಯ ಮುಂದೆ ಚಪ್ಪಲಿ ಹೊಲಿಯುವ ಕೆಲಸ ಮಾಡುತ್ತಿದ್ದರು. ಅನಾರೋಗ್ಯದಿಂದ ಗುರುವಾರ ತಡರಾತ್ರಿ ಮನೆಯಲ್ಲಿ ಮಲಗಿದಲ್ಲೇ ಮೃತರಾಗಿದ್ದರು. ಅಂತಿಮಯಾತ್ರೆಗೆ ಹೆಗಲು ಕೊಡಲು ಸ್ಥಳೀಯರು ಮುಂದೆ ಬಂದಿಲ್ಲ. ಬಂಧುಗಳಾರೂ ಬಾರದಿದ್ದರಿಂದ ಕುಟುಂಬದ ಕೆಲವರೇ ಪಟ್ಟಣದ ಹೊರವಲಯದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಮಗ ತಳ್ಳುಗಾಡಿಯಲ್ಲಿ ಶವ ಸಾಗಿಸುತ್ತಿದ್ದರೆ, ಮೃತರ ಪತ್ನಿ  ಜೊತೆಯಲ್ಲಿ ತೆರಳಿದ್ದಾರೆ. ಸ್ಥಳೀಯರು ಮಾಡಿರುವ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದೆ.

ವಿಡಿಯೊ ಮಾಡುತ್ತಿರುವ ಕೆಲವರು ನೆರವಿಗೆ ಬಂದಿಲ್ಲದಿರುವ ದೃಶ್ಯಗಳು ಕೂಡ ವಿಡಿಯೊದಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.