ಮೈಸೂರು: ‘ಹ್ಯೂಬ್ಲೊ ವಾಚನ್ನು ಸರ್ಕಾರದ ದುಡ್ಡಲ್ಲಿ ಖರೀದಿಸಿರಲಿಲ್ಲ. ಲೂಟಿ ಹೊಡೆದಿದ್ದ ದುಡ್ಡು ಅದಲ್ಲ. ಈ ವಿಚಾರವಾಗಿ ಈಗಾಗಲೇ ಎಸಿಬಿ ಕ್ಲೀನ್ ಚಿಟ್ ಕೊಟ್ಟಿದೆ’ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಶನಿವಾರ ಇಲ್ಲಿ ಬಿಜೆಪಿ ಮುಖಂಡರ ಆರೋಪಕ್ಕೆ ತಿರುಗೇಟು ನೀಡಿದರು.

‘ಯಾರೋ ಗಿಫ್ಟ್ ಕೊಟ್ಟಿದ್ದು. ಅದು ಮುಗಿದು ಹೋದ ಅಧ್ಯಾಯ. ಜನರನ್ನು ದಾರಿ ತಪ್ಪಿಸಲಿಕ್ಕಾಗಿಯೇ ಬಿಜೆಪಿ ನಾಯಕರು ಇಂತಹ ಹೇಳಿಕೆ ಕೊಡ್ತಿದ್ದಾರೆ. ನಾನು ಮತ್ತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹಳೆಯ ಪ್ರಕರಣಗಳನ್ನು ಪ್ರಸ್ತಾಪಿಸಲೇ’ ಎಂದು ಕೆಣಕಿದರು.

‘ಡಿ.ಕೆ.ಶಿವಕುಮಾರ್ ತಪ್ಪಿತಸ್ಥರಲ್ಲ. ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ರಾಜಕೀಯ ದುರುದ್ದೇಶದಿಂದ ಪ್ರಕರಣ ದಾಖಲಿಸಿದೆ. ನ್ಯಾಯಾಲಯದಿಂದ ಜಾಮೀನು ಸಿಕ್ಕಿದೆ. ಬಿಜೆಪಿಯವರ ನೈತಿಕತೆ ಗೊತ್ತಿದೆ. ಅವರ ಹೇಳಿಕೆಗೆ ಯಾವ ಪ್ರತಿಕ್ರಿಯೆಯನ್ನು ಕೊಡಲ್ಲ’ ಎಂದರು.

ಡೋಂಟ್ ಕೇರ್: ‘ನನ್ನ ಆರೋಪ ಇರುವುದು ಮುಖ್ಯಮಂತ್ರಿ, ಸಚಿವರ ವಿರುದ್ಧ. ಯಾವನೋ ರವಿಕುಮಾರ್ ಅಂತೆ. ನಂಗೆ ನೋಟಿಸ್ ಕೊಟ್ಟವನೆ. ನಾನು ಲಾಯರ್. ಆ ನೋಟಿಸ್ ಬಂಡವಾಳ ಗೊತ್ತಿದೆ. ಡೋಂಟ್ ಕೇರ್’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.