ಗುರುವಾರ , ಜುಲೈ 29, 2021
27 °C

ರಾಜ್ಯದಲ್ಲಿ ಈ ವರೆಗೆ 9.25 ಲಕ್ಷ ಜನರಿಗೆ ಕೋವಿಡ್ ಪತ್ತೆ‌ ಪರೀಕ್ಷೆ: ಸುಧಾಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಇಲ್ಲಿಯವರೆಗೆ 9.25 ಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದ್ದು, ಫಲಿತಾಂಶ ಅತ್ಯಂತ ನಿಖರವಾಗಿದೆ ಎಂದು ವೈದ್ಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ಈ ಕುರಿತು ಟ್ವೀಟ್ ‌ಮಾಡಿರುವ ಅವರು, ವಿಶ್ವಸಂಸ್ಥೆ ಪ್ರತಿ ದಿನ 10 ಲಕ್ಷ ಜನಸಂಖ್ಯೆಗೆ ಕನಿಷ್ಠ 140 ಪರೀಕ್ಷೆ ಮಾಡಬೇಕು ಎಂದು ಶಿಫಾರಸು ಮಾಡಿದೆ. ರಾಜ್ಯದಲ್ಲಿ ನಿತ್ಯ 10 ಲಕ್ಷ ಜನಸಂಖ್ಯೆಗೆ ಪ್ರತಿಯಾಗಿ 297 ಜನರಿಗೆ ಪರೀಕ್ಷೆ ಮಾಡುವ ಮೂಲಕ ಆ ಗುರಿ ತಲುಪಿರುವ ಭಾರತದ ಟಾಪ್‌10 ರಾಜ್ಯಗಳ ಪೈಕಿ ಸ್ಥಾನ ಪಡೆದಿದೆ ಎಂದು ಅವರು ಹೇಳಿದ್ದಾರೆ.

ನಾವು ನಡೆಸುವ ಪರೀಕ್ಷೆಗಳು ನಿಖರ ವರದಿ ನೀಡುವ ಆರ್‌ಟಿ–ಪಿಸಿಆರ್‌ ಪರೀಕ್ಷೆಗಳಾಗಿವೆ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು