ಮಂಗಳವಾರ, ಆಗಸ್ಟ್ 3, 2021
27 °C

ತಿರುಮಲ: ₹ 200 ಕೋಟಿಯಲ್ಲಿ 1,005 ಯಾತ್ರಿಕರಿಗೆ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ತಿರುಪತಿಯ ತಿರುಮಲದಲ್ಲಿ ಈ ಹಿಂದಿನ ಸರ್ಕಾರದ ಅವಧಿಯಲ್ಲಿ 150 ಯಾತ್ರಿಕರಿಗೆ 58,741 ಚದರ ಅಡಿ ಜಾಗದಲ್ಲಿ ₹ 26 ಕೋಟಿ ವೆಚ್ಚದಲ್ಲಿ ಹೊಸ ಅತಿಥಿಗೃಹ ನಿರ್ಮಿಸಲು ಮಂಜೂರಾತಿ ನೀಡಿದ್ದರೆ, ಇದೀಗ 1,005 ಯಾತ್ರಿಕರಿಗೆ ಅನುಕೂಲ ಕಲ್ಪಿಸಲು 3.22 ಲಕ್ಷ ಚದರ ಅಡಿ ಜಾಗದಲ್ಲಿ ₹ 200 ಕೋಟಿ ವೆಚ್ಚದಲ್ಲಿ ಪರಿಷ್ಕೃತ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ’ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

‘ಇದೇ ಜೂನ್‌ 25ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹೆಚ್ಚಿನ ಮೂಲಸೌಲಭ್ಯ ಕಲ್ಪಿಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ. ಹೊಸ ಆದೇಶದ ಪ್ರಕಾರ, 140 ಯಾತ್ರಾರ್ಥಿಗಳ ವಾಸ್ತವ್ಯಕ್ಕೆ 12 ಡಾರ್ಮಿಟರಿಗಳು, 610 ಯಾತ್ರಾರ್ಥಿಗಳಿಗಾಗಿ 305 ಕೊಠಡಿಗಳು, ಗಣ್ಯರಿಗೆ ವಿಶೇಷ 24 ಸೂಟ್‌ ಕೊಠಡಿಗಳು, 4 ಡಬಲ್‌ ಸೂಟ್‌ ಕೊಠಡಿ, ಒಂದು ಕಲ್ಯಾಣ ಮಂಟಪ, ಹೆಚ್ಚುವರಿ ಪಾರ್ಕಿಂಗ್‌ ವ್ಯವಸ್ಥೆ’ ಇರಲಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.