ಶನಿವಾರ, ಸೆಪ್ಟೆಂಬರ್ 26, 2020
22 °C

‘ಅಧಿಕಾರಿಗಳ ಮಾತು ಸ್ಫೂರ್ತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೆಂಕಟರಮಣ ಕವಡಿಕೇರಿ

ಶಿರಸಿ: ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಆಯ್ದುಕೊಂಡಿದ್ದ ಯಲ್ಲಾಪುರದ ವೆಂಕಟರಮಣ ಕವಡಿಕೇರಿ ಅವರು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 363ನೇ ರ್‍ಯಾಂಕ್ ಗಳಿಸಿದ್ದಾರೆ.

ಕೃಷಿಕರಾಗಿರುವ ಸುಮತಿ ಮತ್ತು ನಾಗೇಶ ಕವಡಿಕೇರಿ ಅವರ ಪುತ್ರ ವೆಂಕಟರಮಣ ಅವರು ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಧಿಕಾರಿಯಾಗಿದ್ದಾರೆ.

‘ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ಸಂಘದ ಸಂಚಾಲಕನಾಗಿದ್ದಾಗ ಅತಿಥಿಗಳಾಗಿ ಬರುತ್ತಿದ್ದ ಹಿರಿಯ ಅಧಿಕಾರಿಗಳ ಮಾತಿನಿಂದ ಸ್ಫೂರ್ತಿಗೊಂಡು ಯುಪಿಎಸ್‌ಸಿ ಪರೀಕ್ಷೆ ಬರೆಯಲು ನಿರ್ಧರಿಸಿದೆ. ನಾಲ್ಕು ಬಾರಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದೆ. ಈ ಬಾರಿ ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ಎದುರಿಸಿದ್ದೆ. ಯಾವುದೇ ಕೋಚಿಂಗ್ ಇಲ್ಲದೇ, ಕೆಲವು ಸ್ನೇಹಿತರು ಸೇರಿ ಗುಂಪು ಅಧ್ಯಯನ ಮಾಡುತ್ತಿದ್ದೆವು’ ಎಂದು ಅವರು ಪ್ರತಿಕ್ರಿಯಿಸಿದರು.

‘ನಾನು ಎರಡನೇ ತರಗತಿಯಲ್ಲಿರುವಾಗಿನಿಂದ ‘ಪ್ರಜಾವಾಣಿ’ ಓದುಗ. ಪರೀಕ್ಷೆ ಸಿದ್ಧತೆಗೆ ಕೂಡ ಈ ಪತ್ರಿಕೆಯನ್ನು ತಪ್ಪದೇ ಓದುತ್ತಿದ್ದೆ’ ಎಂದು ಹೆಮ್ಮೆಯಿಂದ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು